ಗೂಗಲ್ ವೆಬ್‌ಸೈಟ್ ಅನ್ನೇ ಬಂಡವಾಳ ಮಾಡಿಕೊಂಡು ಹಣ ವಂಚಿಸುತ್ತಿದ್ದ ನಾಲ್ವರು ಗ್ಯಾಂಗ್ ನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಪರನ್ ಸಿಂಗ್ ಚೌಹಾಣ್ (೨೫), ನರೇಂದ್ರ (೩೨), ಧರ್ಮೇಂದರ್ ಹಾಗೂ ಹರಿಯಾಣ ಮೂಲದ ಧರ್ಮವೀರ್ ಬಂಧಿತ ಗ್ಯಾಂಗ್ ನ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಆರೋಪಿಗಳು ವಾಹನ ಟ್ರಾನ್ಸ್ ಪೋರ್ಟ್ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದರು. ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಲ್ಲಿ ಜಾಹಿರಾತು ನೀಡುತ್ತಿದ್ದರು. ಜಾಹಿರಾತಿನಲ್ಲಿ ತಮ್ಮ ಫೋನ್ ನಂಬರ್ ಹಾಕಿಕೊಳ್ಳುತ್ತಿದ್ದರು. ಟ್ರಾನ್ಸ್ ಪೋರ್ಟ್ ಮಾಡುವ ಮೊದಲು ಹಣ ಪಡೆಯುತ್ತಿದ್ದರು. ವಾಹನ ತೆಗೆದುಕೊಂಡು ತಮ್ಮ ಅಸಲಿ ಆಟ ಶುರು ಮಾಡುತ್ತಿದ್ದರು.
ಮೊದಲೇ ಹಣ ಪಡೆಯುತ್ತಿದ್ದ ಆರೋಪಿಗಳು, ತಿಂಗಳು ಕಳೆದರೂ ವಾಹನ ಡೆಲಿವರಿ ಮಾಡದೇ ಕಳ್ಳಾಟವಾಡುತ್ತಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಇದೇ ರೀತಿ ವಂಚನೆಗೊಳಗಾಗಿದ್ದ ವ್ಯಕ್ತಿ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರುದಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬುಲೆಟ್ ಬೈಕ್ ಶಿಫ್ಟ್ ಮಾಡಲು ಮುಂದಾಗಿದ್ದರು. ಮೊದಲು 4ಸಾವಿರ ಶಿಫ್ಟಿಂಗ್ ಚಾರ್ಜ್ ಪಡೆದಿದ್ದರು. ೨೦ ದಿನದವರೆಗೂ ವಾಹನ ಹುಬ್ಬಳ್ಳಿ ತಲುಪಿರಲಿಲ್ಲ.
ಈ ವೇಳೆ ಸಂಪರ್ಕಿಸಿದ ದೂರುದಾರನಿಗೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹೆಚ್ಚಿನ ಹಣ ನೀಡಿದ್ದರೂ ಬೈಕ್ ತಲುಪಿರಲಿಲ್ಲ. ಆರೋಪಿಗಳು ನಂತರ ಪ್ರತಿಷ್ಠಿತ ಕಂಪನಿ ಜಾಗಕ್ಕೆ ಬೈಕ್ ಬಿಟ್ಟು ಬರುತ್ತಿದ್ದರು. ಬೈಕ್ ಮಾಲೀಕ ಹುಡುಕಿ ಬಂದಾಗ ಎಲ್ಲಾ ಕೃತ್ಯ ಬಯಲಿಗೆ ಬಂದಿದೆ. ಆರೋಪಿಗಳನ್ನು ಸಿಇಎನ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ರಾಮ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy