nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯ ಕೊಲೆ: ಮುಖ್ಯ ಆರೋಪಿಗೆ ಜೀವಾವಧಿ, ಮತ್ತೊಬ್ಬಳಿಗೆ 3 ವರ್ಷ ಜೈಲು

    June 10, 2026

    ಜಿಲ್ಲಾ ಮಿಷನ್ ಟಾಸ್ಕ್ ಫೋರ್ಸ್ ಸಭೆ:  ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

    June 10, 2026

    ಗ್ರಾಮೀಣ, ಪಾರಂಪರಿಕ ಕ್ರೀಡೆಗಳಿಗೆ ಆದ್ಯತೆ ನೀಡಿ: ಕ್ರೀಡಾ, ಮುಜರಾಯಿ ಇಲಾಖೆ ಪ್ರಗತಿ ಪರಿಶೀಲಿಸಿ ಡಿಸಿಎಂ  ಪರಮೇಶ್ವರ್ ಸೂಚನೆ

    June 10, 2026
    Facebook Twitter Instagram
    ಟ್ರೆಂಡಿಂಗ್
    • ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯ ಕೊಲೆ: ಮುಖ್ಯ ಆರೋಪಿಗೆ ಜೀವಾವಧಿ, ಮತ್ತೊಬ್ಬಳಿಗೆ 3 ವರ್ಷ ಜೈಲು
    • ಜಿಲ್ಲಾ ಮಿಷನ್ ಟಾಸ್ಕ್ ಫೋರ್ಸ್ ಸಭೆ:  ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
    • ಗ್ರಾಮೀಣ, ಪಾರಂಪರಿಕ ಕ್ರೀಡೆಗಳಿಗೆ ಆದ್ಯತೆ ನೀಡಿ: ಕ್ರೀಡಾ, ಮುಜರಾಯಿ ಇಲಾಖೆ ಪ್ರಗತಿ ಪರಿಶೀಲಿಸಿ ಡಿಸಿಎಂ  ಪರಮೇಶ್ವರ್ ಸೂಚನೆ
    • ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ
    • ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಜೂ.15ರೊಳಗೆ ಹೆಸರು ನೋಂದಾಯಿಸಿ
    • ತುಮಕೂರು: ಹಿರಿಯ ನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ
    • ತುಮಕೂರು: ಜೂ. 13–14ರಂದು ಆಟೋ ಎಕ್ಸ್ ಪೋ
    • ವಿಶ್ವ ವಿಕಲಚೇತನರ ದಿನಾಚರಣೆ: ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗಂಡನಿಂದ ಮಾರಣಾಂತಿಕ ಹಲ್ಲೆ: ಮಹಿಳಾ ಆಯೋಗದ ಅಧ್ಯಕ್ಷೆಯ ಕಾಲು ಹಿಡಿದು ಕಣ್ಣೀರು ಹಾಕಿದ ಸಂತ್ರಸ್ತೆಯರು
    ಕುಣಿಗಲ್ February 11, 2026

    ಗಂಡನಿಂದ ಮಾರಣಾಂತಿಕ ಹಲ್ಲೆ: ಮಹಿಳಾ ಆಯೋಗದ ಅಧ್ಯಕ್ಷೆಯ ಕಾಲು ಹಿಡಿದು ಕಣ್ಣೀರು ಹಾಕಿದ ಸಂತ್ರಸ್ತೆಯರು

    By adminFebruary 11, 2026No Comments2 Mins Read
    nagalakshmi

    ಕುಣಿಗಲ್: ನನ್ನ ಗಂಡ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ, ತಲೆ ಬುರುಡೆಗೆ ಗಾಯವಾಗಿ ವೈದ್ಯರು ನಾಲ್ಕು ಹೊಲಿಗೆ ಹಾಕಿದ್ದಾರೆ, ಆದರೆ ನನಗೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಾಲಿಗೆ ಬಿದ್ದು ನ್ಯಾಯ ಕೇಳಿದ ಘಟನೆ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು.

    ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಕುಣಿಗಲ್ ಬಿಬಿಎಂಪಿ ನೌಕರನ ಪತ್ನಿ ಸುಧಾ ಹಾಗೂ ಸಂತೆ ಮಾವತ್ತೂರು ಗ್ರಾಮದ ಸುಮಿತ್ರಾ ನಮಗೆ ನಮ್ಮ ಗಂಡಂದಿರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಮಾರಣಾಂತಿಕ ಹಲ್ಲೆ ಮಾಡಿ ತಲೆ ಬುರುಡೆ ಗಾಯವಾಗಿ ಹಲವು ಬಾರಿ ವೈದ್ಯರು ಬುರುಡೆಗೆ ಹೊಲಿಗೆ ಹಾಕಿದ್ದಾರೆ. ನಾನು ಪೊಲೀಸ್ ಠಾಣೆಗೆ ದೂರು ನೀಡಿದರೆ ನನಗೆ ಪೊಲೀಸರು ನ್ಯಾಯ ಕೊಡುತ್ತಿಲ್ಲ. ನನ್ನ ಗಂಡನ ವಿರುದ್ಧ ಕ್ರಮಕೈಗೊಂಡಿಲ್ಲ. ನಾವು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು ಎಂದು ಕಣ್ಣೀರು ಹಾಕಿದರು.


    Provided by
    Provided by

    ಸಿಪಿಐ ವಿರುದ್ಧ ಎಸ್ಪಿಗೆ ದೂರು: ದೂರವಾಣಿ ಮೂಲಕ ಎಸ್ಪಿ ಕೆ.ವಿ.ಅಶೋಕ್ ಅವರನ್ನು ಸಂಪರ್ಕಿಸಿದ ನಾಗಲಕ್ಷ್ಮಿ, ಸುಧಾ ಎಂಬ ಮಹಿಳೆ ಕುಣಿಗಲ್ ಪೊಲೀಸ್ ಠಾಣೆಗೆ ನ್ಯಾಯ ಕೇಳಿ ದೂರು ಸಲ್ಲಿಸಿದರೆ, ಸರಿಯಾಗಿ ಪೊಲೀಸರು ಸ್ಪಂದಿಸಿಲ್ಲ. ಹಲ್ಲೆ ಮಾಡಿದವರನ್ನು ಬಂಧಿಸಿರುವುದಿಲ್ಲ ಹಾಗೂ ಅಟೆಂಪ್ಟ್ ಟು ಮರ್ಡರ್ ಕೇಸ್ ಹಾಕಿಲ್ಲ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಮಾವತ್ತೂರು ಗ್ರಾಮದ ಕಸದ ಗಾಡಿ ಕೆಲಸದ ಸುಮಿತ್ರಾಳಿಗೆ ಆಕೆಯ ಪತಿ ಅರವಿಂದ್ ಎಂಬುವವನು ತಲೆಗೆ ಹಲ್ಲೆ ಮಾಡಿದ್ದಾನೆ. ವೈದ್ಯರು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ. ಈ ಇಬ್ಬರು ಹೆಣ್ಣು ಮಕ್ಕಳಿಗೆ ಸ್ಥಳೀಯ ಪೊಲೀಸರು ಸ್ಪಂದಿಸದ ಕಾರಣ ನನ್ನ ಬಳಿ ಬಂದು ನೊಂದ ಮಹಿಳೆಯರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ, ಪೊಲೀಸ್ ಕಮಿಷನರ್‌ಗೆ ಪತ್ರ ಬರೆಯುವುದಾಗಿ ಎಸ್ಪಿಯವರಿಗೆ ತಿಳಿಸಿದರು.

    ಸಿಎಂಗೆ ದೂರು ಎಚ್ಚರಿಕೆ: ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಕಳೆದ ಐದು ತಿಂಗಳಿಂದ ಪಿಎಫ್, ಇಎಸ್‌ ಐ ಕಟ್ಟಿಲ್ಲ ಎಂದು ಗುತ್ತಿಗೆ ನೌಕರರು ದೂರಿದಾಗ, ಆಕ್ರೋಶಗೊಂಡ ನಾಗಲಕ್ಷ್ಮಿ ಡಿಎಚ್‌ಒ ಡಾ.ಚಂದ್ರಶೇಖರ್‌ಗೆ ದೂರವಾಣಿ ಮೂಲಕ ಕೇವಲ 10 ಅಥವಾ 12 ಸಾವಿರಕ್ಕೆ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸರಿಯಾಗಿ ಪಿಎಫ್ ಮತ್ತು ಇಎಸ್‌ಐ ಹಣ ಕಟ್ಟುವುದಿಲ್ಲ ಎಂದು ದೂರು ಬಂದಿದೆ.

    ಸತ್ತ ಮೇಲೆ ನ್ಯಾಯ ಕೊಡುತ್ತೀರಾ? ಕುಣಿಗಲ್ ವೃತ್ತ ನಿರೀಕ್ಷಕ ಮಾದಪ್ಪ ನಾಯಕ್ ಅವರನ್ನು ನೆಲದ ಮೇಲೆ ಕೂರಿಸಿಕೊಂಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು, ಮಹಿಳೆಯರ ಮೇಲೆ ಅವರ ಗಂಡಂದಿರು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಇದು ಅಟೆಂಪ್ಟ್ ಟು ಮರ್ಡರ್ ಕೇಸ್‌ ಗೆ ಬರುವುದಿಲ್ಲವೇ? ದೂರು ಕೊಟ್ಟ ತಕ್ಷಣ ಆರೋಪಿಗಳನ್ನು ಠಾಣೆಗೆ ಕರೆಸಿ ಕ್ರಮಕೈಗೊಂಡಿದ್ದರೆ ಇಷ್ಟೆಲ್ಲಾ ಅನಾಹುತ ಆಗುತ್ತಿತ್ತೆ? ಆ ಮಹಿಳೆಯರು ಸತ್ತ ಮೇಲೆ ನ್ಯಾಯ ಕೊಡುತ್ತೀರಾ ಎಂದು ಸಿಪಿಐಗೆ ತರಾಟೆ ತೆಗೆದುಕೊಂಡರು.

    ಏನು ಕ್ರಮಕೈಗೊಂಡಿದ್ದೀರಿ? ಗುತ್ತಿಗೆ ಪಡೆಯುವ ವ್ಯಕ್ತಿಗಳು ಸರ್ಕಾರಿ ಮಂಜೂರು ತಂದ ಅನುದಾನ ನೀಡದಿದ್ದರೂ ನಾವು ನೌಕರರಿಗೆ ಸಂಬಳ ಕೊಡುತ್ತೇವೆ ಹಾಗೂ ಪಿಎಫ್ ಮತ್ತು ಇಎಸ್‌ಐ ಕಟ್ಟುತ್ತೇವೆ ಎಂದು ಬರೆದುಕೊಟ್ಟಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಕೂಡಲೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.

    ಅನಾಥ ಮಹಿಳೆಗೆ ಉತ್ತಮ ಚಿಕಿತ್ಸೆಗೆ ಸೂಚನೆ: ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಲೂಕಿನ ಎಡಿಯೂರು ಗ್ರಾಮದ ಅಡಿಲಕ್ಷ್ಮಿ ಅವರ ಆರೋಗ್ಯವನ್ನು ಅಧ್ಯಕ್ಷೆ ನಾಗಲಕ್ಷ್ಮಿ ವಿಚಾರಿಸಿದರು. ನನಗೆ ತಂದೆ, ತಾಯಿ, ಮಕ್ಕಳು ಯಾರೂ ಇಲ್ಲ, ಗಂಡ ಬಿಟ್ಟು ಹೋಗಿದ್ದಾನೆ. ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಅಡಿಲಕ್ಷ್ಮಿ ತಿಳಿಸಿದರು. ಈಕೆಗೆ ಉತ್ತಮ ಚಿಕಿತ್ಸೆ ನೀಡಿ, ಆರೋಗ್ಯ ಸುಧಾರಣೆಯಾದ ಬಳಿಕ ಸಾಂತ್ವನ ಕೇಂದ್ರಕ್ಕೆ ಕಳಿಸಿಕೊಡಿ ಎಂದು ಸಿಡಿಸಿಪಿ ಕಮಲಾಗೆ ತಿಳಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ

    June 6, 2026

    ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ: ಕುಣಿಗಲ್ ತಾ.ಪಂ. ಸಭೆಯಲ್ಲಿ  ಅಧಿಕಾರಿಗಳಿಗೆ ಸೂಚನೆ

    May 30, 2026

    ಕುಣಿಗಲ್: ಗ್ರಾಪಂ ಸ್ವತ್ತಿನಲ್ಲಿ ಅಕ್ರಮ ಮಳಿಗೆ: ಒತ್ತುವರಿ ಜಾಗದಲ್ಲಿ ಗ್ರಂಥಾಲಯಕ್ಕೆ ದಲಿತ ಸಂಘಟನೆ ಆಗ್ರಹ

    May 21, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯ ಕೊಲೆ: ಮುಖ್ಯ ಆರೋಪಿಗೆ ಜೀವಾವಧಿ, ಮತ್ತೊಬ್ಬಳಿಗೆ 3 ವರ್ಷ ಜೈಲು

    June 10, 2026

    ತುಮಕೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು…

    ಜಿಲ್ಲಾ ಮಿಷನ್ ಟಾಸ್ಕ್ ಫೋರ್ಸ್ ಸಭೆ:  ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

    June 10, 2026

    ಗ್ರಾಮೀಣ, ಪಾರಂಪರಿಕ ಕ್ರೀಡೆಗಳಿಗೆ ಆದ್ಯತೆ ನೀಡಿ: ಕ್ರೀಡಾ, ಮುಜರಾಯಿ ಇಲಾಖೆ ಪ್ರಗತಿ ಪರಿಶೀಲಿಸಿ ಡಿಸಿಎಂ  ಪರಮೇಶ್ವರ್ ಸೂಚನೆ

    June 10, 2026

    ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ

    June 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.