nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೆ.ಎನ್.ರಾಜಣ್ಣನ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಿಸಿ: ಸಚಿವ ಬಾಲಕೃಷ್ಣಗೆ ಸಿದ್ದಗಂಗಪ್ಪ ಎಚ್ಚರಿಕೆ

    November 6, 2026

    ಅಡಿಕೆ ತೋಟಗಳಿಗೆ ಅಧಿಕಾರಿಗಳ ಭೇಟಿ |  ರೋಗ ನಿಯಂತ್ರಣಕ್ಕೆ ರೈತರಿಗೆ ಸೂಕ್ತ ಮಾರ್ಗದರ್ಶನ

    November 6, 2026

    ಹುಲ್ಲು, ಮುಳ್ಳುಗಿಡಗಳ ಪೊದೆಯಾದ ಸರ್ಕಾರಿ ಕಾಲೇಜು ಆಟದ ಮೈದಾನ! | ಕ್ರೀಡಾ ವಿಭಾಗದ ನಿಧಿಯಲ್ಲಿ ₹18 ಲಕ್ಷವಿದ್ದರೂ ನಿರ್ವಹಣೆ ಏಕಿಲ್ಲ?

    November 6, 2026
    Facebook Twitter Instagram
    ಟ್ರೆಂಡಿಂಗ್
    • ಕೆ.ಎನ್.ರಾಜಣ್ಣನ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಿಸಿ: ಸಚಿವ ಬಾಲಕೃಷ್ಣಗೆ ಸಿದ್ದಗಂಗಪ್ಪ ಎಚ್ಚರಿಕೆ
    • ಅಡಿಕೆ ತೋಟಗಳಿಗೆ ಅಧಿಕಾರಿಗಳ ಭೇಟಿ |  ರೋಗ ನಿಯಂತ್ರಣಕ್ಕೆ ರೈತರಿಗೆ ಸೂಕ್ತ ಮಾರ್ಗದರ್ಶನ
    • ಹುಲ್ಲು, ಮುಳ್ಳುಗಿಡಗಳ ಪೊದೆಯಾದ ಸರ್ಕಾರಿ ಕಾಲೇಜು ಆಟದ ಮೈದಾನ! | ಕ್ರೀಡಾ ವಿಭಾಗದ ನಿಧಿಯಲ್ಲಿ ₹18 ಲಕ್ಷವಿದ್ದರೂ ನಿರ್ವಹಣೆ ಏಕಿಲ್ಲ?
    • ಚೆಸ್‌ ನಲ್ಲಿ ಹಳ್ಳಿ ಪ್ರತಿಭೆ ರಾಷ್ಟ್ರಮಟ್ಟಕ್ಕೆ ಆಯ್ಕೆ |   ರಾಜ್ಯ ಮಟ್ಟದ ಚಾಂಪಿಯನ್‌ ಶಿಪ್‌ ನಲ್ಲಿ ಯದುನಂದನ್ ಜಿ.ಎನ್. ಸಾಧನೆ
    • ಮುಂದಿನ ವರ್ಷ ಚಿಕ್ಕನಾಯಕನಹಳ್ಳಿ, ಕಂದಿಕೆರೆ ಭಾಗಕ್ಕೆ ಹೇಮಾವತಿ ನೀರು | ನಾಲಾ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಶಾಸಕ ಸಿ.ಬಿ. ಸುರೇಶ್‌ ಬಾಬು ಸೂಚನೆ
    • ಬೆಂಡೋಣೆಯಲ್ಲಿ ಸಂಭ್ರಮದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ | ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳೂ ಅಗತ್ಯ: ಸಿಆರ್‌ ಪಿ ರಂಗರಾಜು
    •  ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!
    • ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ಎಚ್ಚರ! ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹುಲ್ಲು, ಮುಳ್ಳುಗಿಡಗಳ ಪೊದೆಯಾದ ಸರ್ಕಾರಿ ಕಾಲೇಜು ಆಟದ ಮೈದಾನ! | ಕ್ರೀಡಾ ವಿಭಾಗದ ನಿಧಿಯಲ್ಲಿ ₹18 ಲಕ್ಷವಿದ್ದರೂ ನಿರ್ವಹಣೆ ಏಕಿಲ್ಲ?
    ಕುಣಿಗಲ್ November 6, 2026

    ಹುಲ್ಲು, ಮುಳ್ಳುಗಿಡಗಳ ಪೊದೆಯಾದ ಸರ್ಕಾರಿ ಕಾಲೇಜು ಆಟದ ಮೈದಾನ! | ಕ್ರೀಡಾ ವಿಭಾಗದ ನಿಧಿಯಲ್ಲಿ ₹18 ಲಕ್ಷವಿದ್ದರೂ ನಿರ್ವಹಣೆ ಏಕಿಲ್ಲ?

    By Ganesh TumkuruNovember 6, 2026No Comments2 Mins Read
    kunigal

    ಕುಣಿಗಲ್ : ತುಮಕೂರು ಜಿಲ್ಲೆಯಲ್ಲಿಯೇ ವಿಶಾಲವಾದ ಕ್ಯಾಂಪಸ್ ಹೊಂದಿರುವ ಕುಣಿಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆಟದ ಮೈದಾನ ನಿರ್ವಹಣೆಯ ಕೊರತೆಯಿಂದ ಹುಲ್ಲು ಮತ್ತು ಮುಳ್ಳಿನ ಪೊದೆಗಳಿಂದ ಆವೃತವಾಗಿದ್ದು, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗಿದೆ.

    ಸುಮಾರು 12 ಎಕರೆ ವಿಸ್ತೀರ್ಣ ಹೊಂದಿರುವ ಕಾಲೇಜು ಆವರಣದಲ್ಲಿ ಸಾವಿರಾರು ಗಿಡಮರಗಳು ಬೆಳೆದು ಹಸಿರು ವಾತಾವರಣ ನಿರ್ಮಾಣವಾಗಿದೆ. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನಲ್ಲಿ ವಿಶಾಲವಾದ ಆಟದ ಮೈದಾನವಿದ್ದರೂ ಅದರ ಸಮರ್ಪಕ ನಿರ್ವಹಣೆ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ.

    ಮೈದಾನದಾದ್ಯಂತ ಮುಳ್ಳಿನ ಗಿಡಗಳು ಬೆಳೆದು ದೊಡ್ಡ ಪೊದೆಗಳಾಗಿ ನಿರ್ಮಾಣವಾಗಿವೆ. ಐದಾರು ಅಡಿ ಎತ್ತರಕ್ಕೆ ಹುಲ್ಲು ಬೆಳೆದು ನಿಂತಿದ್ದು, ಕ್ರೀಡಾ ಚಟುವಟಿಕೆಗಳಿಗೆ ಬಳಸಬೇಕಾದ ಟ್ರ್ಯಾಕ್‌ಗಳೂ ನಿರ್ವಹಣೆ ಇಲ್ಲದೆ ಹಾಳಾಗಿವೆ. ಇದರಿಂದ ವಿದ್ಯಾರ್ಥಿಗಳು ಮೈದಾನದಲ್ಲಿ ಆಟೋಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

    ಮೈದಾನದಲ್ಲಿ ಹಾವು ಸೇರಿದಂತೆ ವಿಷ ಜಂತುಗಳು ಆಶ್ರಯ ಪಡೆಯುವ ಆತಂಕವಿದ್ದು, ಕ್ರೀಡಾ ಚಟುವಟಿಕೆಗಳಿಗಾಗಿ ಮೈದಾನಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಇಂತಹ ಅನಾಹುತ ಸಂಭವಿಸಿದರೆ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಾಡುತ್ತಿದೆ.

    ಕಾಲೇಜು ಶಿಕ್ಷಣ ಇಲಾಖೆ ಲಕ್ಷಾಂತರ ರೂಪಾಯಿ ವೇತನ ನೀಡಿ ದೈಹಿಕ ಶಿಕ್ಷಣ ನಿರ್ದೇಶಕರನ್ನು ನೇಮಕ ಮಾಡಿದ್ದರೂ, ಆಟದ ಮೈದಾನದ ನಿರ್ವಹಣೆ ಬಗ್ಗೆ ಏಕೆ ಗಮನಹರಿಸಿಲ್ಲ ಎಂಬುದು ಪ್ರಶ್ನೆಯಾಗಿದೆ. ಮೇಲಾಗಿ, ಕಾಲೇಜಿನ ಕ್ರೀಡಾ ವಿಭಾಗದ ನಿಧಿಯಲ್ಲಿ ಸುಮಾರು ₹18 ಲಕ್ಷ ಹಣವಿದೆ ಎಂಬ ಮಾಹಿತಿ ಕೇಳಿಬರುತ್ತಿದ್ದು, ಈ ಹಣವನ್ನು ವಿದ್ಯಾರ್ಥಿಗಳ ಕ್ರೀಡಾ ಅಭಿವೃದ್ಧಿ ಹಾಗೂ ಮೈದಾನದ ನಿರ್ವಹಣೆಗೆ ಬಳಸಿಕೊಳ್ಳದಿರುವುದಕ್ಕೆ ಕಾರಣವೇನು ಎಂಬ ಅನುಮಾನ ವ್ಯಕ್ತವಾಗಿದೆ.

    ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಈ ಬಗ್ಗೆ ತಕ್ಷಣ ಗಮನಹರಿಸಿ, ಮೈದಾನದಲ್ಲಿರುವ ಮುಳ್ಳಿನ ಪೊದೆಗಳನ್ನು ತೆರವುಗೊಳಿಸಿ, ಎತ್ತರಕ್ಕೆ ಬೆಳೆದಿರುವ ಹುಲ್ಲನ್ನು ಕತ್ತರಿಸಿ, ಕ್ರೀಡಾ ಟ್ರ್ಯಾಕ್‌ಗಳನ್ನು ದುರಸ್ತಿಪಡಿಸಬೇಕು. ಕ್ರೀಡಾ ವಿಭಾಗದ ನಿಧಿಯ ಬಳಕೆ ಕುರಿತು ಪಾರದರ್ಶಕ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಶಿಥಿಲಗೊಂಡ ಮಾರಮ್ಮ ದೇವಿ ದೇವಸ್ಥಾನ ಪುನರ್‌ ನಿರ್ಮಾಣಕ್ಕೆ ಒತ್ತಾಯ | ದೇವಸ್ಥಾನ ನಿರ್ಮಾಣಕ್ಕೆ ಅಡ್ಡಿ : ತಹಶೀಲ್ದಾರ್‌ ಗೆ ಗ್ರಾಮಸ್ಥರಿಂದ ಮನವಿ

    October 31, 2026

    ಕುಣಿಗಲ್ ನಲ್ಲಿ ವಿಜಯ ದಶಮಿ ಆಚರಣೆ: ಹರಿದು ಬಂದ ಜನ ಸಾಗರ, ಕುದುರೆ ಏರಿದ ತಹಶೀಲ್ದಾರ್

    October 22, 2026

    ಕುಣಿಗಲ್‌ ಉತ್ಸವಕ್ಕೆ ಸರ್ಕಾರದ ಹಣ ಬಳಸಿಲ್ಲ: ಜೆಡಿಎಸ್‌ ಅಧ್ಯಕ್ಷ ಬಿ.ಎನ್‌. ಜಗದೀಶ್‌ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು

    October 17, 2026

    Leave A Reply Cancel Reply

    Our Picks

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೆ.ಎನ್.ರಾಜಣ್ಣನ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಿಸಿ: ಸಚಿವ ಬಾಲಕೃಷ್ಣಗೆ ಸಿದ್ದಗಂಗಪ್ಪ ಎಚ್ಚರಿಕೆ

    November 6, 2026

    ಮಧುಗಿರಿ: ಟೌನ್‌ ಶಿಪ್ ವಿಚಾರದಲ್ಲಿ ಕ್ಷೇತ್ರದ ಜನತೆಯಿಂದ ಟೀಕೆಗೆ ಗುರಿಯಾಗಿರುವ ಮಾಗಡಿ ಶಾಸಕ ಹಾಗೂ ಸಚಿವ ಬಾಲಕೃಷ್ಣ ಅವರು ಶಾಸಕ…

    ಅಡಿಕೆ ತೋಟಗಳಿಗೆ ಅಧಿಕಾರಿಗಳ ಭೇಟಿ |  ರೋಗ ನಿಯಂತ್ರಣಕ್ಕೆ ರೈತರಿಗೆ ಸೂಕ್ತ ಮಾರ್ಗದರ್ಶನ

    November 6, 2026

    ಹುಲ್ಲು, ಮುಳ್ಳುಗಿಡಗಳ ಪೊದೆಯಾದ ಸರ್ಕಾರಿ ಕಾಲೇಜು ಆಟದ ಮೈದಾನ! | ಕ್ರೀಡಾ ವಿಭಾಗದ ನಿಧಿಯಲ್ಲಿ ₹18 ಲಕ್ಷವಿದ್ದರೂ ನಿರ್ವಹಣೆ ಏಕಿಲ್ಲ?

    November 6, 2026

    ಚೆಸ್‌ ನಲ್ಲಿ ಹಳ್ಳಿ ಪ್ರತಿಭೆ ರಾಷ್ಟ್ರಮಟ್ಟಕ್ಕೆ ಆಯ್ಕೆ |   ರಾಜ್ಯ ಮಟ್ಟದ ಚಾಂಪಿಯನ್‌ ಶಿಪ್‌ ನಲ್ಲಿ ಯದುನಂದನ್ ಜಿ.ಎನ್. ಸಾಧನೆ

    November 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.