ಸರಗೂರು: ತಾಲ್ಲೂಕಿನ ನುಗು ವನ್ಯಜೀವಿ ಧಾಮ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಎತ್ತಿಗೆ ಗ್ರಾಮದ ಜಮೀನಿನ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಗೆ ಕೇರಳ ರಾಜ್ಯದ ವೈನಾಡು ಜಿಲ್ಲೆ ಪಾಲಮಂಗಲಂ ಮೂಲದ ಕೂಲಿಕಾರ್ಮಿಕರ ಬಲಿಯಾಗಿದ್ದಾನೆ.
ಸರಗೂರು ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಗೆ ಗ್ರಾಮದಲ್ಲಿ ಕೇರಳದ ಮೂಲದ ಜಮೀನು ಕೆಲಸ ಮಾಡುತ್ತಿರುವ ಸಮಯದಲ್ಲಿ ಕೇರಳದ 60 ವರ್ಷ ವಯಸ್ಸಿನ ಬಾಲನ್ ಮೃತಪಟ್ಟಿದ್ದಾನೆ.
ಹೆಡಿಯಾಲ ಮತ್ತು ಚಿಕ್ಕಬರಗಿ ಹೋಗುವ ರಸ್ತೆಯ ಬದಿಯಲ್ಲಿ ಇರುವ ಜಮೀನಿನಲ್ಲಿ ಕಾಡಾನೆ ಬೆಳೆಗಳನ್ನು ನಾಶ ಮಾಡಿದೆ. ನಂತರ ಪರಮೇಶ ಎಂಬುವರು ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಆದರೆ ಅವರು ಆನೆಯಿಂದ ತಪ್ಪಿಸಿಕೊಂಡು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ಇದಾದ ಬಳಿಕ ಬಾಲನ್ ಎಂಬುವವರು ಜಮೀನು ನಲ್ಲಿ ಸಡ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವಾಗ ಕಾಡಿನಿಂದ ಬಂದ ಆನೆ ಏಕಾಏಕಿ ದಾಳಿ ಮಾಡಿದೆ. ಈ ಘಟನೆಯನ್ನು ಪರಮೇಶ್ ಅವರು ಪ್ರತ್ಯಕ್ಷವಾಗಿ ಕಂಡಿದ್ದಾರೆ.
ಘಟನೆ ವೇಳೆ ಅಕ್ಕ ಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಕಾಡಾನೆಯನ್ನು ಕಾಡಿಗೆ ಓಡಿಸಿದ್ದಾರೆ. ಹೆಡಿಯಾಲ ವಲಯ ಅಧಿಕಾರಿ ಹಾಗೂ ನುಗು ವನ್ಯಜೀವಿ ಧಾಮ ಅರಣ್ಯ ವಲಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ:
ಘಟನೆಯನ್ನು ವಿರೋಧಿಸಿ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಬೆಳಗ್ಗೆ 7:30ಕ್ಕೆ ದಾಳಿ ನಡೆಸಿ ರೈತನನ್ನು ಹತ್ಯೆ ಮಾಡಿದೆ. ಆದರೆ, ಆದರೆ ಸಾಕಷ್ಟು ಹೊತ್ತಿನವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ರೈತರು ದೂರಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ವಲಯದ ಅಧಿಕಾರಿ ಪರಮೇಶ್ ಅವರನ್ನು ರೈತರು ತೀವ್ರವಾಗಿ ತರಾಟೆಗೆತ್ತಿಕೊಂಡರು.
ಘಟನೆ ಸಂಬಂಧ ಮಾತನಾಡಿದ ಪ್ರಕಾಶ್, ಅರಣ್ಯದಂಚಿನಲ್ಲಿ ಇರುವ ಸೋಲಾರ್ ವಿದ್ಯುತ್ ಸಂಪರ್ಕ ಹಾಗೂ ಕಾಡಾನೆ ಇಳಿಯುವುವ ಜಾಗದಲ್ಲಿ ಮಣ್ಣು ಎತ್ತಿಸಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.
ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಹಾಗೂ ಸೋಲಾರ್ ಅಳವಡಿಸಬೇಕು, ಹಗಲು ವೇಳೆಯಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಎಂದು ಒತ್ತಾಯಿಸಿದರು. ಎರಡು ವಾರಗಳಿಂದ ಹಿಂದೆ ಹಾದನೂರು ಗ್ರಾಮದಲ್ಲಿ ಇಬ್ಬರು ರೈತರ ಮೇಲೆ ಹುಲಿ ದಾಳಿ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಹೆಡಿಯಾಲ ವಲಯದ ಅಧಿಕಾರಿ ಪರಮೇಶ್ ಮಾತನಾಡಿ, ಕಾಡುಪ್ರಾಣಿಗಳಿಂದ ದಾಳಿಗೊಳಗಾಗಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ 7.5 ಲಕ್ಷ ನೀಡಲಿದ್ದು, ಅಷ್ಟು ಪರಿಹಾರವನ್ನು ಮಾತ್ರ ಕೊಡಲು ಸಾಧ್ಯ. ತಕ್ಷಣಕ್ಕೆ 2 ಲಕ್ಷ ರೂ. ಪರಿಹಾರ ನೀಡಿದ ಅವರು, ಮರಣೋತ್ತರ ಪರೀಕ್ಷೆ ವರದಿ ಬಂದ ಕೂಡಲೇ ಉಳಿದ 5.5 ಲಕ್ಷ ರೂ. ನೀಡಲಾಗುವುದು ಎಂದು ತಿಳಿಸಿದರು.
ಸರಗೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಮೃತದೇಹವನ್ನು ನೀಡಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz