ಸರಗೂರು: ನಮ್ಮ ತಂದೆ ಕಾಲದಿಂದಲೂ ನಮಗೆ ಮಾದಿಗ ಸಮುದಾಯದವರು ಜೊತೆಯಲ್ಲಿ ಇದ್ದು ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಾದಿಗ ಸಮುದಾಯ 28 ಗ್ರಾಮಗಳು ಇವೆ. ಗ್ರಾಮಗಳಿಗೆ ಸಮುದಾಯದ ಭವನ ಹಾಗೂ ದೇವಸ್ಥಾನದ ನಿರ್ಮಾಣಕ್ಕೆ ನನ್ನ ಅನುದಾನವನ್ನು ನೀಡುತ್ತಾ ಬರುತ್ತಿದ್ದಾನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ಮೊಳೆಯೂರು ಕಾವಲ್ ಗ್ರಾಮದಲ್ಲಿ ಬೀದಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಸಿದ್ದಪ್ಪಾಜಿ ದೇವಸ್ಥಾನ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಪ್ಠಾಪನಾ ಕಾರ್ಯಕ್ರಮ ಭಾನುವಾರ ನಡೆಯಿಸಿ ನಂತರ ಮಾತನಾಡಿದರು.
ದೇವರ ಕಾರ್ಯದ ಜೊತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಹೆಚ್ಚು ಒತ್ತು ನೀಡಬೇಕು. ನಾವುಗಳು ದೇವರ ಕಾರ್ಯಕ್ರಮ ನಡೆಯುತ್ತಿದೆ.ಅದರೆ ನಾವುಗಳಿಗೆ ಶಿಕ್ಷಣ ಮುಖ್ಯವಾಗಿ ಕಲ್ಪಿಸಿಕೊಡಬೇಕು ಎಂದು ಮಹಿಳೆಯರಿಗೆ ಹಾಗೂ ಪೋಷಕರಿಗೆ ಕರೆ ನೀಡಿದರು.
ಸಿದ್ದಪ್ಪಾಜಿ ರಾಜಪ್ಪಾಜಿ ಇವರನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಯಬೇಕು. ಇಂತ ಕಾರ್ಯಕ್ರಮ ಮಾಡುವ ಜೊತೆಯಲ್ಲಿ ದೇವರ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಕರಿಸಿ ಕಾರ್ಯಕ್ರಮ ನಡೆಯಬೇಕು ಎಂದರು ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ನಾವು ಕೂಡ ಪ್ರತಿ ವರ್ಷ ಕಪ್ಪಡಿ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾನೆ. ಯಾವ ದೇವರಿಗೂ ಇಂತ ಸಮಾಜದವರೆ ಪೂಜೆ ಮಾಡಬೇಕು ಎಂದು ಎಲ್ಲಿ ಬರೆದಿಲ್ಲ. ನಮಗೆ ನಾವು ಮಾಡಿಕೊಂಡಿರುವುದು ಇದರಿಂದ ನಡೆದುಕೊಂಡು ಬಂದಿದೆ. ಈ ಸಮಾಜದವರಿಂದ ಪೂಜೆ ಸಲ್ಲಿಸಿದ್ದಾರೆ ಒಳ್ಳೆಯದಾಗುತ್ತೆ ಎಂದು ಭಾವಿಸಿಕೊಂಡು ಬದುಕುತ್ತಾ ಇರೋದು ಅಷ್ಟೇ. ಈ ಪ್ರಪಂಚದಲ್ಲಿ ಇರುವುದೇ ಒಂದೇ ದೇವರು.ಭಕ್ತಿ ಭಾವದಿಂದ ನಡೆದುಕೊಂಡು ಬಂದರೆ ದೇವರು ಯಾವುದೇ ರೂಪದಲ್ಲಿ ನೀಡುತ್ತಾನೆ. ಅದೇ ರೀತಿಯಲ್ಲಿ ನಾನು ಭಕ್ತಿ ಭಾವದಿಂದ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದರಿಂದ ನನ್ನನು ಎರಡು ಬಾರಿ ಶಾಸಕರಾಗಿ ತಾಲೂಕಿನ ಜನತೆ ಮಾಡಿದ್ದಾರೆ.ನಮ್ಮ ಕುಟುಂಬಕ್ಕೆ ಮೂರು ಅವಕಾಶ ಕಲ್ಪಿಸಿದೆ.ನಾನು ಏಳು ವರ್ಷಗಳಿಂದ ಶಾಸಕರಾಗಿ ಆಯ್ಕೆ ಬಳಿಕ ಇಲ್ಲಿವರೆಗೂ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಜನರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಶನಿವಾರದಂದು ಮುಂಜಾನೆಯೆ ಸಿದ್ದಪ್ಪಾಜಿಯ ಕಂಡಾಯಗಳನ್ನು ಕೆರೆಯಲ್ಲಿ ಶುಚಿಗೊಳಿಸಿ, ವಿವಿಧ ಬಗೆಯ ಹೂವಿನ ಅಲಂಕಾರಗಳನ್ನು ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಕಳಶಹೊತ್ತ 101 ಬಾಲಕಿಯರು, ಸಿದ್ದಪ್ಪಾಜಿ ಕಂಡಾಯ, ಹೂಹೊಂಬಾಳೆ ಉತ್ಸವ. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ಮಂಗಳವಾದ್ಯ, ನಂದಿ ಧ್ವಜಕಂಬ ಕುಣಿತ ಮೆರವಣಿಗೆಯಲ್ಲಿ ಸಾಗಲಿದ್ದು ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿಸಿ.
ದೇವರಿಗೆ ಪಂಚಾಮೃತ. ಅಭಿಷೇಕ, ಅಷ್ಟೋತ್ತರ ಮತ್ತು ಮಹಾಮಂಗಳಾರತಿ ನೆರವೇರಿದವು, ಸಂಜೆ ಅರಳಿಕಟ್ಟೆ ಮಹದೇವಸ್ವಾಮಿ ಇವರಿಂದ ಶ್ರೀ ಸಿದ್ದಪ್ಪಾಜಿ ಕಥೆ ನಡೆಯಲಿದ್ದು, ಸೋಮವಾರದಂದು ಮೈಸೂರಿನ ಟಿವಿಎಸ್ ಕುಮಾರ್ ಅರ್ಪಿಸುವ ಕ್ರೇಜಿ ಮ್ಯೂಸಿಕಲ್ ಇವೆಂಟ್ಸ್ ಇವರಿಂದ ಆರ್ಕೇಷ್ಟ್ರಾ ನಡೆಯುತ್ತಿದೆ. ದೇವಸ್ಥಾನ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಪಿ.ರವಿ, ಮಾದಿಗ ಸಮಾಜದ ಮಾಜಿ ಅಧ್ಯಕ್ಷ ಪಿ.ನಾಗರಾಜು, ಎಂಡಿಸಿಸಿ ಬ್ಯಾಂಕ್ ಸದಸ್ಯ ಪರಶಿವಮೂರ್ತಿ, ಎಸ್ಸಿ ಎಸ್ಟಿ ಸಮಿತಿ ಸದಸ್ಯ ಬೆಟ್ಟ ಸ್ವಾಮಿ, ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಬಿ.ಆನಂದ, ಮುಖಂಡ ಅಣ್ಣಯ್ಯ ಸ್ವಾಮಿ, ಗ್ರಾ.ಪಂ. ಅಧ್ಯಕ್ಷ ದೇವದಾಸ್, ಮಾಜಿ ತಾಪಂ ಸದಸ್ಯ ವೈಕುಂಠಯ್ಯ, ಮಾಜಿ ತಾಪಂ ಅಧ್ಯಕ್ಷ ಎಚ್. ಹನು, ಯಜಮಾನರು ನಿಂಗರಾಜು, ಗುಡಿಗೌಡರ ನಾಗರಾಜು ಎಂ.ಎಸ್., ರಾಜಪ್ಪ, ಮುಖಂಡರಾದ ನಾಗರಾಜು, ನಾಗೇಂದ್ರ, ಇನ್ನೂ ಮುಖಂಡರು ಸೇರಿದಂತೆ ಸಿದ್ದಪ್ಪಾಜಿ ದೇವಸ್ಥಾನ ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


