ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಸಿಂಗನಹಳ್ಳಿ ಗ್ರಾಮ ವಾಸಿ ಶನಿವಾರಪ್ಪ ಬಿನ್ ಲೇಟ್ ಚಿಕ್ಕಪ್ಪಯ್ಯ ರವರಿಗೆ ಸೇರಿದ ಊರಿನ ಹೊರ ಭಾಗದಲ್ಲಿರುವ ಮನೆ ಹಿಂಬದಿಯ ಸ.ನ 159/2 ರಲ್ಲಿ ಕುರಿಗಳಿಗೆ ಮೇವು ತರಲು ಹೊರ ಹೋಗಿದ್ದಾಗ ಗುರುವಾರ ಸುಮಾರು ಬೆಳಗ್ಗೆ 10 ಗಂಟೆ ಸಮಯದಲ್ಲಿ ಬೀದಿ ನಾಯಿಗಳ ಗುಂಪೊಂದು ಕುರಿ ಶೆಡ್ ಗೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿ, 24 ಕುರಿಗಳು ಸಾವನ್ನಪ್ಪಿದ್ದು, 7 ಕುರಿಗಳು ಗಾಯಗೊಂಡಿವೆ.
ಸ್ಥಳಕ್ಕೆ ಪಂಚಾಯಿತಿ ಸಿಬ್ಬಂದಿ, ಪಶು ವೈದ್ಯಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅನುಗ್ರಹ ಯೋಜನೆಯಡಿ ಪರಿಹಾರ ಮೊತ್ತ ಕೊಡಿಸಲಾಗುವುದು: ಘಟನೆ ಬಗ್ಗೆ ಪಶು ಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ಎಸ್.ಕೆ. ಮಾತನಾಡಿ, ಮೃತಪಟ್ಟಿರುವ ಕುರಿಗಳಿಗೆ ಸರ್ಕಾರದ ಅನುಗ್ರಹ ಯೋಜನೆಯಡಿ ತಲಾ ಒಂದು ಕುರಿಗೆ 7500 ರೂ. ಪರಿಹಾರದ ಮೊತ್ತವನ್ನು ನೇರವಾಗಿ ಮೃತ ಕುರಿ ಮಾಲೀಕರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


