nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    September 16, 2026

    ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    September 16, 2026

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026
    Facebook Twitter Instagram
    ಟ್ರೆಂಡಿಂಗ್
    • ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್
    • ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
    • ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ
    • ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
    • ಕರ್ನಾಟಕದಲ್ಲಿ ಮಳೆ ಕೊರತೆ ಎಫೆಕ್ಟ್​: ಮತ್ತೆ ಅಕ್ಕಿ ದರ ಏರಿಕೆ ಶಾಕ್
    • ಬಿಗ್‌ ಬಾಸ್ ಕನ್ನಡ 13:  ದೊಡ್ಮನೆಯಿಂದ  ಓಂ ಪ್ರಕಾಶ್‌ ರಾವ್ ಹೊರಕ್ಕೆ | ಅಸಲಿ ಕಾರಣ ಏನು?
    • ಮಳೆ ಕೊರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ; ರೈತರ ನೆರವಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್
    • ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ದೇಶದ ಭದ್ರತೆಗೆ ಅಡಿಪಾಯ: ಡಿಸಿಎಂ ಡಾ. ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗೂಳೂರು ಬಳಿ 106 ಎಕರೆ ಭೂಮಿ ಮರಳಿ ಸರ್ಕಾರಕ್ಕೆ | 50 ವರ್ಷಗಳ ಹಳೆಯ ಗೇಣಿ ಅರ್ಜಿ ಪ್ರಕರಣಕ್ಕೆ ತೆರೆ
    ತುಮಕೂರು July 10, 2026

    ಗೂಳೂರು ಬಳಿ 106 ಎಕರೆ ಭೂಮಿ ಮರಳಿ ಸರ್ಕಾರಕ್ಕೆ | 50 ವರ್ಷಗಳ ಹಳೆಯ ಗೇಣಿ ಅರ್ಜಿ ಪ್ರಕರಣಕ್ಕೆ ತೆರೆ

    By adminJuly 10, 2026No Comments2 Mins Read
    shubha kalyan

    ತುಮಕೂರು: ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಗೂಳೂರು ಬಳಿ 106 ಎಕರೆ 23 ಗುಂಟೆ ವಿಸ್ತೀರ್ಣದ ಅಮೂಲ್ಯ ಸಾರ್ವಜನಿಕ ಆಸ್ತಿಯನ್ನು ಸರ್ಕಾರದ ಸ್ವಾಧೀನದಲ್ಲಿ ಉಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಹತ್ವದ ಆದೇಶದ ಮೂಲಕ ಕ್ರಮ ವಹಿಸಿದ್ದಾರೆ.

    ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗ್ರಾಮದ ಸರ್ವೆ ನಂ.3 ಹಾಗೂ ಕಲ್ಲುಮಠ ಗ್ರಾಮದ ಸರ್ವೆ ನಂ.13, 17 ಮತ್ತು 20ರ ಜಮೀನುಗಳಿಗೆ ಸಂಬಂಧಿಸಿದಂತೆ 1974ರಲ್ಲಿ ಭೂಸುಧಾರಣಾ ಕಾಯ್ದೆ, 1961ರ ಕಲಂ 48ಎ(1)ರ ಅಡಿಯಲ್ಲಿ ಗೇಣಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಇಂಡೆಕ್ಸ್ ಆಫ್ ಲ್ಯಾಂಡ್ ದಾಖಲೆಗಳ ಪ್ರಕಾರ ಈ ಜಮೀನುಗಳು ದೇವದಾಯ ಇನಾಂ ಜಮೀನುಗಳಾಗಿರುವುದರಿಂದ ಭೂಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹಿಂಬರಹ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಮೇಲ್ಮನವಿ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳು ನಡೆದಿದ್ದು, ಅಂತಿಮವಾಗಿ ಕರ್ನಾಟಕ ಉಚ್ಛ ನ್ಯಾಯಾಲಯವು ದಿನಾಂಕ 02-06-1999ರಂದು ನೀಡಿದ ಆದೇಶದಲ್ಲಿ, ಸದರಿ ಜಮೀನುಗಳು ಮೈಸೂರು (ಧಾರ್ಮಿಕ ಮತ್ತು ದತ್ತಿ) ಇನಾಮುಗಳ ನಿರ್ಮೂಲನಾ ಕಾಯ್ದೆ, 1955ರ ವ್ಯಾಪ್ತಿಗೆ ಒಳಪಡುವ ಇನಾಂ ಜಮೀನುಗಳಾಗಿದ್ದು, ಅವುಗಳ ಕುರಿತ ಹಕ್ಕುದಾರಿಕೆ ಅರ್ಜಿಗಳನ್ನು ಪರಿಶೀಲಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿ, ಪ್ರಕರಣವನ್ನು ಮರುಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿತ್ತು.

    ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪ್ರಕರಣ ಸಂಖ್ಯೆ ಇಎನ್ ಎ(ಅ) 26/1999–2000ರಲ್ಲಿ ಸಮಗ್ರ ವಿಚಾರಣೆ ನಡೆಸಿದರು. ಪ್ರಕರಣದಲ್ಲಿದ್ದ ಹಲವಾರು ಮೂಲ ಅರ್ಜಿದಾರರು ಮೃತಪಟ್ಟಿದ್ದು, ಅವರ ವಾರಸುದಾರರು ತಮ್ಮ ಪೂರ್ವಜರು ಸದರಿ ಜಮೀನುಗಳಲ್ಲಿ ಯಾವುದೇ ಕಾಲದಲ್ಲೂ ಉಳುಮೆ ನಡೆಸಿಲ್ಲ, ಸ್ವಾಧೀನದಲ್ಲಿಯೂ ಇರಲಿಲ್ಲ ಹಾಗೂ ತಪ್ಪು ತಿಳುವಳಿಕೆಯಿಂದ ಗೇಣಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಲಿಖಿತವಾಗಿ ಒಪ್ಪಿಕೊಂಡು, ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು.

    ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಹಾಗೂ ಕಲ್ಲುಮಠ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿರುವ ಈ ಅಮೂಲ್ಯ ಸರ್ಕಾರಿ ಭೂಮಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಮುಂದಿನ ಹಲವು ಪೀಳಿಗೆಗೆ ಶಾಶ್ವತ ಪ್ರಯೋಜನವನ್ನು ಒದಗಿಸಲು ಅನುಕೂಲವಾಗಿದೆ. ಈ ಭೂಮಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮತ್ತು ಜನಕಲ್ಯಾಣವನ್ನು ಪ್ರತಿಬಿಂಬಿಸುವ ಯೋಜನೆಗಳು ಸಾಕಾರಗೊಂಡಾಗ ಮಾತ್ರ ಸರ್ಕಾರದ ವಶಕ್ಕೆ ಭೂಮಿಯನ್ನು ಮರಳಿ ಪಡೆಯುವ ಈ ಕಾರ್ಯಾಚರಣೆಯ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ.

    — ಶುಭ ಕಲ್ಯಾಣ್, ಜಿಲ್ಲಾಧಿಕಾರಿ

    ಸಾರ್ವಜನಿಕ ಉದ್ದೇಶದ ಬಳಕೆಗೆ ಸಿಕ್ಕಿತು 106 ಎಕರೆ

    ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದ್ದು, ಹಣ ನೀಡಿದರೂ ಭೂಮಿ ಸಿಗದಿರುವ ಪರಿಸ್ಥಿತಿ ತುಮಕೂರು ಸುತ್ತಮುತ್ತ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸುಮಾರು 500 ಕೋಟಿ ರೂ. ಮೌಲ್ಯದ 106 ಎಕರೆ ಸಾರ್ವಜನಿಕ ಆಸ್ತಿಯು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಪ್ಪಿಸಿ ಮುಂಬರುವ ಪೀಳಿಗೆಗೆ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಲು ಅನುವಾಗುವಂತೆ ಕ್ರಮಕೈಗೊಳ್ಳುವ ಮೂಲಕ ತಮ್ಮ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿದ್ದ ನಕಾರಾತ್ಮಕ ಟೀಕೆಗಳಿಗೆ ಸಕಾರಾತ್ಮಕ ಕಾರ್ಯ ರೂಪದ ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಮುಖಾಂಶಗಳು:

    • ತುಮಕೂರು ತಾಲ್ಲೂಕು ಕೊಂಡಾಪುರ ಸ.ನಂ.3, ಕಲ್ಲುಮಠ ಸರ್ವೆ ನಂ.13,17,20ರ ಜಮೀನಿಗೆ ಸಂಬಂಧಿಸಿದಂತೆ 1974ರಲ್ಲಿ ಸಲ್ಲಿಕೆಯಾಗಿದ್ದ ಗೇಣಿ ಅರ್ಜಿಗಳು.
    • ಇಂಡೆಕ್ಸ್ ಆಫ್ ಲ್ಯಾಂಡ್ ದಾಖಲೆ ಪ್ರಕಾರ ಈ ಸರ್ವೆನಂಬರ್ ಜಮೀನುಗಳು ದೇವದಾಯ ಇನಾಂ ಜಮೀನಾಗಿದ್ದು, ಗೇಣಿ ವಾರಸುದಾರಿಕೆ ನೀಡಲು ನಿರಾಕರಿಸಿ ಅರ್ಜಿದಾರರಿಗೆ ಹಿಂಬರಹ.
    • ಹಿಂಬರಹ ಪ್ರಶ್ನಿಸಿ ವಿವಿಧ ಹಂತದಲ್ಲಿ ಅರ್ಜಿದಾರರಿಂದ ಮೇಲ್ಮನವಿ, ನ್ಯಾಯಾಂಗ ಹೋರಾಟ.
    • 2-6-1999ರಲ್ಲಿ ಹೈಕೋರ್ಟ್‌ನಿಂದ ಡಿಸಿಗೆ ಪ್ರಕರಣ ವರ್ಗ. 1999-2000 ಇಸವಿಯಲ್ಲಿ ಸಮಗ್ರ ವಿಚಾರಣೆ ನಡೆದು ಅರ್ಜಿದಾರರಿಂದ ಗೇಣಿ ಅರ್ಜಿ ಹಿಂಪಡೆಯಲು ಸಹಮತ.
    • ಅರ್ಜಿದಾರರೇ ಒಪ್ಪಿದರೂ 26 ವರ್ಷದಿಂದ ಇತ್ಯರ್ಥ ಬಾಕಿ. ವಿಚಾರಣೆಗೆ ಕೈಗೆತ್ತಿಕೊಂಡ ಡಿಸಿ ಶುಭಕಲ್ಯಾಣ್‌ ರಿಂದ 24–4–2026ರಂದು ಮಹತ್ವದ ಆದೇಶ ಪ್ರಕಟ. ಸದರಿ ಸ್ವತ್ತು ಗೂಳೂರು ಛತ್ರ/ ಮುಜಾಫರಖಾನ ನಿರ್ವಹಣೆಗೆ ಮೀಸಲು ಎಂದು ಘೋಷಣೆ.
    • ಡಿಸಿ ಆದೇಶದನುಸಾರ ತಹಶೀಲ್ದಾರ್‌ ರಿಂದ ಪಹಣಿ ತಿದ್ದುಪಡಿ ಸೇರಿ ಅಗತ್ಯಕ್ರಮದ ಮೂಲಕ ಮರಳಿ ಸರ್ಕಾರದ ಸ್ವಾಧೀನಕ್ಕೆ.

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    September 16, 2026

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026

    ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ

    September 16, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    September 16, 2026

    ತುಮಕೂರು: ದೇಶದ, ಸಮಾಜದ ಬೆಳವಣಿಗೆಗೆ ನಿರ್ಮಾತೃಗಳಾಗಿ ಎಂಜಿನಿಯರ್‌ ಗಳು ಇಂಜಿನಿಯರ್‌ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಸರ್ಕಾರಗಳು ಬದಲಾಗುವ ವ್ಯವಸ್ಥೆಯನ್ನು…

    ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    September 16, 2026

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026

    ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ

    September 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.