ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರ್ನಾಟಕ ಸಮೃದ್ಧಿ ಜನಸೇವಾ ವೇದಿಕೆಯ ಯುವ ಕಣ್ಮಣಿ , ಯುವ ಘಟಕದ ಅಧ್ಯಕ್ಷರಾಗಿದ್ದ ಸಿ.ಟಿ.ವಸಂತ್ ಕುಮಾರ್ ನಾಯಕ ಅವರ ಸವಿ ನೆನಪಿಗಾಗಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಕುರಿತು ನಮ್ಮ ತುಮಕೂರು ಜೊತೆಗೆ ಮಾತನಾಡಿದ ತಾಲ್ಲೂಕು ನಗರದ ಘಟಕದ ಅಧ್ಯಕ್ಷರಾದ ಅಪ್ಸರ್ ಪಾಷಾ ಅವರು, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಕೋರಿದರು.
ಕರ್ನಾಟಕ ಸಮೃದ್ದಿ ಜನಸೇವಾ ವೇದಿಕೆಯ ಯುವ ಘಟಕದ ಅಧ್ಯಕ್ಷರಾದ ಸಿ.ಟಿ.ವಸಂತ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಬಲ್ಯದ ಸಂಗತಿಯಾಗಿದೆ. ಸಿ.ಟಿ.ವಸಂತ್ ಕುಮಾರ್ ನಾಯಕ ರವರು ಪ್ರತಿಯೊಂದು ಸ್ಪರ್ಧೆಯಲ್ಲೂ ಮುಂದಿದ್ದರು. ಇಂತಹ ಯುವ ಪ್ರತಿಭೆಗಳು ಇಂದು ನಮ್ಮೆಲ್ಲರನ್ನು ಅಗಳಿರುವುದು ನಿಜಕ್ಕೂ ಸಹ ದುರ್ದೈವದ ವಿಷಯವಾಗಿದೆ ಎಂಬುದಾಗಿ ಬೇಸರ ವ್ಯಕ್ತಪಡಿಸಿದರು.
ಸಿ.ಟಿ.ವಸಂತ್ ಕುಮಾರ್ ನಾಯಕ ಅವರು, ಕಳೆದ ತಿಂಗಳುಗಳ ಹಿಂದೆಯಷ್ಟೇ ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದು, ಅವರ ಸವಿ ನೆನಪಿಗಾಗಿಯೇ ಈ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಕ್ರಿಕೆಟ್ ಪಂದ್ಯದಲ್ಲಿ ಮೊದಲನೇಯ ಬಹುಮಾನ 5,001 ಹಾಗೂ ಎರಡನೇಯ ಬಹುಮಾನ 3,001 ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.ಇದೇ ವೇಳೆ ತಾಲ್ಲೂಕು ಉಪಾಧ್ಯಕ್ಷರಾದ ಶ್ರೀ ಸಿದ್ದೇಶ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಮೃದ್ದಿ ಜನಸೇವಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy