ಅಸ್ಸಾಂ:ವ್ಯಕ್ತಿಯೊಬ್ಬ ಸಹ ಗ್ರಾಮಸ್ಥರೊಬ್ಬರ ತಲೆ ಕಡಿದ ಬಳಿಕ ಕತ್ತರಿಸಿದ ತಲೆಯನ್ನು ತೆಗೆದುಕೊಂಡು 25 ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಸೋನಿಪುರ ಜಿಲ್ಲೆಯಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಹೇಮ್ರಾಮ್ ಎಂದು ಗುರುತಿಸಲಾಗಿದೆ.
ಸ್ವಾತಂತ್ರ್ಯ ದಿನದಂದು ಸ್ಥಳೀಯವಾಗಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದರೆ ಇಬ್ಬರು ಸ್ನೇಹಿತರು ಆ ಪಂದ್ಯದ ಮೇಲೆ ಹಣ ಮಿಲಾಯಿಸಿದರು. ಪಂದ್ಯದಲ್ಲಿ ಸೋತವರು ವಿಜೇತರಿಗೆ 500 ರೂ ಕೊಡಬೇಕು. ಈ ವೇಳೆ ಬೆಟ್ ಗೆದ್ದ ವ್ಯಕ್ತಿ ತನಗೆ 500 ಕೊಡುವಂತೆ ಕೇಳಿದನು. ಆದರೆ ಇನ್ನೊಬ್ಬ ವ್ಯಕ್ತಿ ಹಣ ನೀಡಲು ನಿರಾಕರಿಸಿದ್ದಾನೆ.
ಆದರೆ ಪದೇ ಪದೇ ಬೆಟ್ಟಿಂಗ್ ಹಣ ಕೇಳಿದಾಗ ಕೋಪಗೊಂಡ ಆರೋಪಿಯು ತನ್ನ ಬಳಿಯಿದ್ದ ಮಚ್ಚಿನಿಂದ ಹೇಮ್ರಾಮ್ ಎಂಬ ವ್ಯಕ್ತಿಯ ತಲೆಯನ್ನು ಕಡೆದಿದ್ದಾನೆ. ತಲೆಯೊಂದಿಗೆ 25 ಕಿಲೋಮೀಟರ್ ನಡೆದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy