ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮತ್ತೊಮ್ಮೆ ಮದುವೆ ಯಾಗಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿದ್ದು ಇದಕ್ಕೆ ಮೇಘನಾ ರಾಜ್ ಅತ್ಯಂತ ಸ್ಪಷ್ಟವಾದ ರಿಯಾಕ್ಷನ್ ನೀಡಿದ್ದಾರೆ.
ಪ್ರೀತಿಸಿ ಮದುವೆಯಾದ ಮೇಘನಾ ಮತ್ತು ಚಿರು ಸರ್ಜಾ ಬದುಕು ಇನ್ನೇನು ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೇನ್ನುವ ಹಂತದಲ್ಲಿರುವಾಗಲೇ ನಡೆದ ಅವಘಡವೊಂದು ಇಡಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿತು. ಚಿರು ಸರ್ಜಾ ತೀವ್ರ ಹೃದಯಾಘಾತದಿಂದ ನಿಧನರಾದರು. ಈ ವೇಳೆ ನಟಿ ಮೇಘನಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಪ್ರೀತಿಸಿದ ಚಿರುವನ್ನು ಕಳೆದುಕೊಂಡು ಕಂಗಾಲಾದ ಮೇಘನಾ ಇದೇ ನೋವಿನಲ್ಲೇ ಮಗನನ್ನು ಹೆತ್ತು ಸಿಂಗಲ್ ಪೇರೇಂಟ್ ರೀತಿಯಲ್ಲಿ ಬೆಳೆಸುತ್ತ ಬರುತ್ತಿದ್ದಾರೆ.
ಚಿರು ಹಾಗೂ ಮೇಘನಾ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾ ಎರಡನೇ ವರ್ಷದ ಹೊಸ್ತಿಲಿನಲ್ಲಿರುವಾಗಲೇ ಮೇಘನಾ ಸರ್ಜಾ ಬಗ್ಗೆ ಹೊಸ ಬಗೆಯ ಸುದ್ದಿಯೊಂದು ಸದ್ದು ಮಾಡಲಾರಂಭಿಸಿದೆ.ಇತ್ತೀಚಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಮೇಘನಾ ರಾಜ್, ನನ್ನ ಸುತ್ತಲೂ ಇರುವ ಹಲವರು ನನಗೆ ಎರಡನೇ ಮದುವೆಯಾಗಲು ಸಲಹೆ ನೀಡುತ್ತಿದ್ದಾರೆ. ಆದರೆ ಒಂಟಿಯಾಗಿರಲು ಮತ್ತು ಒಂಟಿಯಾಗಿಯೇ ಮಗನನ್ನು ಬೆಳೆಸಲು ಸಲಹೆ ನೀಡುವ ತಂಡವೂ ಇದೆ ಎಂದು ಮೇಘನಾ ಹೇಳಿದ್ದಾರೆ.
ನಾನು ಇನ್ನೊಂದು ಮದುವೆಯಾಗಬೇಕೇ ಎಂಬುದನ್ನು ನನಗೆ ನಾನು ಇನ್ನೂ ಕೇಳಿಕೊಂಡಿಲ್ಲ. ಇನ್ನೊಂದು ಮಹತ್ವದ ಸಂಗತಿ ಎಂದರೇ ಚಿರು ಬಿಟ್ಟು ಹೋದ ಬದುಕಿನ ಮಾರ್ಗ. ನಾಳೆ ಏನಾಗಲಿದೆ ಎಂದು ನಾನು ಯೋಚಿಸುವುದಿಲ್ಲ. ಒಂದೆರಡು ದಿನಗಳ ನಂತರ ನನ್ನ ಜೀವನ ಹೇಗಿರುತ್ತದೆ ಎಂದು ನಾನು ಯೋಚಿಸುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ಮೇಘನಾ ಮದುವೆ ವಿಚಾರ ಮುನ್ನಲೆಗೆ ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy