ತುಮಕೂರು: ರಾಜಕೀಯ ದುರುದ್ದೇಶ ಇಟ್ಟುಕೊಂಡು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆಯಲಾಗಿದೆ. ಹೀಗೆ ಮುಂದುವರೆದರೆ ಬಿಜೆಪಿಯವರು ಕಾರ್ಯಕ್ರಮ ಮಾಡಲು ಕೂಡ ಬಿಡೋದಿಲ್ಲ ಎಂದು ಕೆ.ಎನ್.ರಾಜಣ್ಣ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಸಂತ್ರಸ್ಥರನ್ನ ವಿಚಾರಿಸಲು ಸಿದ್ದರಾಮಯ್ಯ ಹೋಗಿದ್ರು. ಬಡವರ, ನಿರಾಶ್ರಿತರ ಪರವಾಗಿ ಪರಿಶೀಲನೆಗೆ ತೆರಳಿದ್ದರು. ರಾಜಕೀಯ ದುರುದ್ದೇಶ ಇಟ್ಟುಕೊಂಡು ಮಾಡಿರೋದು ಅನಾಗರಿಕ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲೆಲ್ಲೋ ಊರಲ್ಲಿ 50 ಜನ ಇರಬಹುದು. ಸಿದ್ದರಾಮಯ್ಯ ತಂಟೆಗೆ ಬಂದ್ರೆ ರಾಜ್ಯವೇ ಉರಿದು ಹೋಗಲಿದೆ. ಹೀಗೆ ಮುಂದುವರೆದರೆ ಬಿಜೆಪಿಯವರು ಕಾರ್ಯಕ್ರಮ ಮಾಡಲು ಕೂಡ ಬಿಡೋದಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಸುಮ್ಮನಿದ್ದೇವೆ. ಈ ಘಟನೆಯನ್ನ ನಾವೆಲ್ಲ ಖಂಡಿಸುತ್ತೇವೆ ಎಂದರು.
ಬಿಜೆಪಿಯಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡ್ರೆ ಪರಿಣಾಮ ನೆಟ್ಟಗಿರಲ್ಲ. ಮಡಿಕೇರಿಯಲ್ಲಿ ಸಿದ್ದರಾಮಯ್ಯನವರು 26 ರಂದು ಪ್ರತಿಭಟನೆ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾವು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗ್ತೀವಿ. ಭದ್ರತಾ ಲೋಪದ ಬಗ್ಗೆ ಸರ್ಕಾರನೇ ಒಪ್ಪಿಕೊಂಡಿದೆ. ಮೊದಲೇ ಭದ್ರತೆ ಯಾಕ್ ಕೊಡಬಾರದಿತ್ತು. ಟೋರ್ ಹೋಗೋ ವಿಚಾರ ಮೊದಲೇ ಮಾಹಿತಿ ನೀಡಿರುತ್ತಾರೆ.
ಮಾಹಿತಿ ಕೊಟ್ಟ ಮೇಲೆ ಪೊಲೀಸರು ಭದ್ರತೆ ನೀಡಬೇಕಿತ್ತು. ಆಗಾಗಿ ಭದ್ರತಾ ಲೋಪ ಮತ್ತು ಇಂಟಲಿಜೆನ್ಸ್ ಫೇಲ್ ಆಗಿದೆ. ಇಲ್ಲಾ ಆಂದ್ರೆ ಉದ್ದೇಶ ಪೂರ್ವಕವಾಗಿ ಸರ್ಕಾರ ಮಾಡಿಸಿದ್ಯಾ ಗೊತ್ತಿಲ್ಲ. ಯಾರೇ ವಿರೋಧ ಪಕ್ಷದವರು ಬಂದ್ರು ಸರ್ಕಾರ ಭದ್ರತೆ ಒದಗಿಸುವುದು ಆದ್ಯ ಕರ್ತವ್ಯ ಎಂದು ಕೆ.ಎನ್.ರಾಜಣ್ಣ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy