nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು

    May 26, 2026

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ

    May 26, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು
    • ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ
    • ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ
    • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
    • ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    • ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
    ಜಿಲ್ಲಾ ಸುದ್ದಿ November 9, 2025

    ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ

    By adminNovember 9, 2025No Comments2 Mins Read
    kanaka dasa

    ಸರಗೂರು:  ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು ಎಂದು  ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಬಿ.ಆನಂದ ನುಡಿದರು.

    ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರದಂದು ಹಮ್ಮಿಕೊಂಡಿದ್ದ 538 ನೇ ಕನಕದಾಸರ ಜಯಂತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಹಾಗೂ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


    Provided by
    Provided by

    ಕನಕದಾಸರು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದಂತಹ ಮಹಾನ್ ದಾಸರಾಗಿದ್ದರು. ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸುಧಾರಣೆಗೆ ಮುಂದಾಗಿ ತಮ್ಮ ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಐಕ್ಯತೆ ಮೂಡಿಸುವ ಕಾರ್ಯ ಮಾಡಿದ ಮಹಾನ ಸಂತರಾಗಿದ್ದರು ಎಂದರು.

    ಸಮಾಜದ ಮುಖಂಡ ಮಾಲೆಗೌಡ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದಿಂದ ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆಯೇ ಹೊರತು ಹೋರಾಟದಿಂದ ಅಲ್ಲ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಕನಕದಾಸರು, ಬಸವಣ್ಣನವರು ಕನ್ನಡದಲ್ಲೆ ಬರೆದರೆ ಹೊರತು ಸಂಸ್ಕೃತದಲ್ಲಿ ಸಾಹಿತ್ಯ ರಚಿಸಲಿಲ್ಲ. ಈ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು. ವರ್ಗರಹಿತ ಸಮಾಜವನ್ನು ಕಟ್ಟಲು ಶ್ರಮಿಸಿದವರು ಕನಕದಾಸರು ಎಂದು ವಿವರಿಸಿದರು.

    ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕ ಹಾಲಪ್ಪರವರು ಇಂದು ಕಳ್ಳತನ ಮಾಡಿ, ಸುಳ್ಳು ಹೇಳಿ ತೀರ್ಥ ಮಾಡುತ್ತಾರೆ. ಭೂಮಿ ನುಂಗಿ ಭಗವಂತನಿಗೆ ಆಭರಣಗಳನ್ನು ಹಾಕುತ್ತಾರೆ. ಅಪ್ಪ–ಅಮ್ಮನಿಗೆ ಊಟ ಹಾಕುವುದಿಲ್ಲ. ಆದರೆ, ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮಾಡುವ ಜನರಿದ್ದಾರೆ. ಇಂತವರನ್ನು ನೋಡಿಯೇ ಕನಕದಾಸರು, `ಅಪ್ಪ–ಅಮ್ಮನಿಗೆ ಊಟ ಹಾಕದೆ ತೀರ್ಥ ಯಾತ್ರೆ ಮಾಡಿದರೇನು ಫಲ ಎಂದು ಹೇಳಿದ್ದಾರೆ.

    ಸಿರಿವಂತರಾದ ಕಾಲಕ್ಕೆ ಕರೆದು ದಾನ ಮಾಡು ಎಂದು ಹೇಳಿದ್ದಾರೆ. ದ್ವೇಷ, ಅಸೂಯೆ, ಅಹಂಕಾರ ತೊರೆದು ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಮಹಾನ್ ದಾರ್ಶನಿಕ ಕನಕದಾಸರು ಎಂದು ವಿವರಿಸಿದರು.

    ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೀರಲ್ತಾರ್ ಮನೋಹರ್. ಪಪಂ ಅಧ್ಯಕ್ಷ ಶಿವಕುಮಾರ್, ಶ್ರೀನಿವಾಸ, ಮಾತನಾಡಿದರು.

    ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಶಿವಕುಮಾರ್, ಸದಸ್ಯ ಶ್ರೀನಿವಾಸ, ಚೆಲುವ ಕೃಷ್ಣ,ಚೈತ್ರ ಸ್ವಾಮಿ, ಸಮಾಜದ ಮುಖಂಡರು ಪುಟ್ಟೇಗೌಡ, ಗಿರೀಶ್, ಚಿಕ್ಕಣ್ಣ, ನಾಗೇಗೌಡ, ದೇವರಾಜು, ಸಂತೋಷ್, ಅಹಿಂದ ಸಂಘದ ಅಧ್ಯಕ್ಷ ರಮೇಶ, ಆನಂದ, ಚಿನ್ನಸ್ವಾಮಿ ದಡದಹಳ್ಳಿ, ತಮ್ಮಣ್ಣ, ದಡದಹಳ್ಳಿ ಶಿವರಾಜು, ರಾಜಣ್ಣ, ಪ್ರಭು ಬರಗಿ, ರಮೇಶ್, ಗಣೇಶ, ಪಾಪಣ್ಣ, ರಾಜಪ್ಪ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ಗೋವಿಂದ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಶಿವರಾಜು, ತಾಲೂಕು ಪಂಚಾಯಿತಿ ನೇರಾಗ ಸಂಯೋಜನಾಧಿಕಾರಿ ಮಹದೇವಸ್ವಾಮಿ , ಸಿಬ್ಬಂದಿಗಳು ಮನೊಹರ್, ರವಿಚಂದ್ರನ್, ಮುಜೀಬ್, ಕುಮಾರ್, ಇನ್ನೂ ಮುಖಂಡರು ಸೇರಿದಂತೆ ಮುಖಂಡರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಈ ವರ್ಷ 52 ಸಾವಿರ ಅತಿಥಿ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

    May 23, 2026

    ಬೀದರ್ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಭೀಕರ ಹಲ್ಲೆ: 7 ಮಂದಿ ಆರೋಪಿಗಳ ಬಂಧನ

    May 23, 2026

    ಒಕ್ಕರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ: ಮೂರು ನಾಯಿಗಳನ್ನು ಬಲಿ ಪಡೆದ ಚಿರತೆ

    May 22, 2026

    Leave A Reply Cancel Reply

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು

    May 26, 2026

    ಕೊರಟಗೆರೆ: ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ 2026–27ನೆ ಸಾಲಿನ ಕಸ್ತೂರ್ಬಾ ಗಾಂಧಿ ಬಾಲಕಿಯರ ವಸತಿ ನಿಲಯ ಆರಂಭಿಸುವ ಸಂಬಂಧ…

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ

    May 26, 2026

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.