ಸಮಾಜದಲ್ಲಿ ನಮ್ಮ ನಡೆ-ನುಡಿಗಳನ್ನು ರೂಪಿಸುವಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯವಾದುದು ಆದ್ದರಿಂದ ಮಾಧ್ಯಮವು ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ, ಸಂವಿಧಾನದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೂಡಲಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬಿ.ಸಿ. ಹೆಬ್ಬಾಳ ತಿಳಿಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡ ಸಮಾಜ ಮತ್ತು ಮಾಧ್ಯಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸಮಾಜದ ಜನತೆಯನ್ನು,ರಾಷ್ಟ್ರವನ್ನು ಮುನ್ನಡೆಸುವ ಅಂಶಗಳನ್ನು ಒಳಗೊಂಡಿರಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಆರ್.ಬಿ.ಕೊಕಟನೂರ ವಹಿಸಿ ಮಾತನಾಡಿ, ಸಕಾಲಕ್ಕೆ ಸರಿಯಾದ ಸುದ್ದಿಯನ್ನು ಸಮಗ್ರವಾಗಿ ಜನರಿಗೆ ಒದಗಿಸುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ. ಪತ್ರಿಕಾ ಧರ್ಮವನ್ನು ಪಾಲಿಸಿ ನೀವು ಬಾವಿ ಪತ್ರಕರ್ತರಾಗಿ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆಯನ್ನು ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಗೆಜೆಟೆಡ್ ಮ್ಯಾನೇಜರ್ ಅರುಣ ಸಕಟ, ಸುಪಿರಿಡೆಂಟ್ ರಾಜು ಹುದ್ದಾರ, ಉಪನ್ಯಾಸಕರಾದ ಗಿರೀಶ ಚವ್ಹಾಣ, ಸಂಜೀವ ಹಾದಿಮನಿ, ವಿಜಯಕುಮಾರ ಕಟ್ಟಿಮನಿ, ಶಿವು ನಾವಿ, ಸೈಯದ್ ಜಮಾದಾರ, ಸಂಗಮೇಶ ದಡ್ಡಿಮನಿ, ಅಪ್ಪು ಮಾದರ, ಪ್ರಕಾಶ ಅಂಬಲಿ, ಉಮೇಶ ಸೊಲ್ಲಾಪುರೆ, ಉಮೇಶ ಕಾಂಬ್ಳೆ, ಎನ್.ಕೆ.ಕುಲಕರ್ಣಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರವೀಣ ಅಂಗಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕಾವೇರಿ ಕಣಕಿಕೊಡಿ ನಿರೂಪಿಸಿದರು. ಶ್ವೇತಾ ದಳವಾಯಿ ವಂದಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz