ತುರುವೇಕೆರೆ: ತಾಲೂಕು ಕಸಬಾ ಹೋಬಳಿಗೆ ಸೇರಿದ ಹುಲಿಕೆರೆ ಗ್ರಾಮದ ವಾಸಿಯಾದ ಗಂಗಣ್ಣ ಕೆಂಪದೇವಮ್ಮ ರವರ ಪುತ್ರಿ ಹಾಗೂ ಕೊಟ್ಟಿಗೆಹಳ್ಳಿ ಗ್ರಾಮದ ವಾಸಿಯಾದ ತಿಮ್ಮಯ್ಯ ಸಾವಿತ್ರಮ್ಮ ದಂಪತಿಗಳ ಮಗ ಇಬ್ಬರು ಯುವ ಜೋಡಿಗಳು ಪರಸ್ಪರ ಸುಮಾರು 4 ವರ್ಷಗಳ ಹಿಂದೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹದಿಂದ ಪ್ರೀತಿಯವರೆಗೂ ಹೋಗಿ ಮದುವೆಯಾಗುವ ಲೆಕ್ಕಾಚಾರಕ್ಕೆ ಬಂದಿದ್ದರು.
ಹುಡುಗ ಮತ್ತು ಹುಡುಗಿ ಇಬ್ಬರೂ ಒಂದೇ ಕೋಮಿಗೆ ಸೇರಿದವರಾಗಿದ್ದು, ಹುಡುಗ ತುರುವೇಕೆರೆ ಪಟ್ಟಣದ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಹುಡುಗಿಯು ಅದೇ ಮಾರ್ಗವಾಗಿ ಕಾಲೇಜಿಗೆ ಹೋಗುವಾಗ ಪ್ರೇಮಾಂಕರವಾಗಿತ್ತು.
ಇವರಿಬ್ಬರ ಮದುವೆಗೆ ಎರಡು ಕುಟುಂಬದ ಸದಸ್ಯರು ಒಪ್ಪಿಗೆ ಸೂಚಿಸಿರಲಿಲ್ಲ. ಈ ವಿಚಾರವಾಗಿ ಹುಡುಗಿಯ ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಸಂಬಂಧ ಠಾಣೆಯಲ್ಲಿ ಎರಡು ಕಡೆಯ ಸಂಬಂಧಿಕರು ಹಾಗೂ ಹಿತೈಷಿಗಳು ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಹುಲಿಕೆರೆ ಗ್ರಾಮದ ವಾಸಿಯಾದ ದಲಿತ ಮುಖಂಡರಾದ ಟಿ.ಎಚ್. ಗುರುದತ್ ಅವರು ಎರಡು ಕಡೆಯ ಮನೆಯವರಿಗೆ ಸರಿಯಾದ ತಿಳುವಳಿಕೆಯನ್ನು ನೀಡಿ ಯುವ ಜೋಡಿಗಳು ಒಂದಾಗಲು ಮದುವೆಗೆ ಎರಡು ಮನೆಯವರನ್ನು ಒಪ್ಪಿಸಿದರು.
ಕೊನೆಗೂ ಪೊಲೀಸ್ ಠಾಣೆ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದೆ ಇರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ತುಂಬಾ ಸರಳವಾಗಿ ತಂದೆ ತಾಯಿಗಳ ಒಪ್ಪಿಗೆ ಪಡೆದು ವಿವಾಹ ನಡೆಯಿತು. ಈ ವಿವಾಹಕ್ಕೆ ಸಾರ್ವಜನಿಕರು ಸಾಕ್ಷಿಯಾದರು ಸಿಹಿ ವಿತರಣೆಯನ್ನು ಸಹ ಸಾರ್ವಜನಿಕರೇ ಹಂಚಿದರು.
ವರದಿ: ಸುರೇಶ್ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz