‘ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ, ದೇವಸ್ಥಾನಕ್ಕೆ ತೆರಳಿರುವುದು ತಪ್ಪಲ್ಲ. ಆ ವಿಚಾರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡುವುದು ಸರಿಯಲ್ಲ‘ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿ, ‘ಹಿಂದೂಗಳಲ್ಲಿ ಸಾಕಷ್ಟು ಜನ ಮಾಂಸಹಾರಿಗಳಿದ್ದಾರೆ. ಬಿಜೆಪಿಯವರಿಗೆ ಚರ್ಚೆ ಮಾಡಲು ಬೇರೆ ವಿಷಯಗಳಿಲ್ಲ. ಇಂತಹ ವಿಷಯಗಳನ್ನು ಬಿಟ್ಟು, ಸಾವರ್ಕರ್ ಅವರ ಬಗ್ಗೆ ಚರ್ಚಿಸಲಿ‘ ಎಂದಿದ್ದಾರೆ.
ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು.
ನಾವು ಮನೆಮನೆಗೆ ತೆರಳಿ ಸಾವರ್ಕರ್ ಬಗ್ಗೆ ತಿಳವಳಿಕೆ ನೀಡುತ್ತೇವೆ. ಪ್ರತಿ ಗಣೇಶ ಪೆಂಡಾಲ್ನಲ್ಲೂ ಸಾವರ್ಕರ್ ಫೋಟೊ ಇಡುತ್ತೇವೆ ಎಂದರು. ‘ನಮ್ಮಲ್ಲಿ ಎಲ್ಲಾ ರೀತಿಯ ಭಕ್ತರಿದ್ದಾರೆ. ಮಾಂಸ ಸೇವನೆ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ವಿವರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB