ತುಮಕೂರಿನ ಹೀರೇಹಳ್ಳಿಯ ಓಂಕಾರೇಶ್ವರ ದೇವಸ್ಥಾನದ ಅರ್ಚಕ ಎಚ್.ಆರ್.ಚಂದ್ರಶೇಖರ್ ಅವರು ಇಸ್ಲಾಮ್ ಗೆ ಮತಾಂತರವಾಗಲು ನಿರ್ಧರಿಸಿದ್ದು, ಆದರೆ ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ ಮುಂಜಿ ಮಾಡಿಸಲು ಸಾಧ್ಯವಾಗದೇ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ತುಮಕೂರು ಗ್ರಾಮಾಂತರದ ಹೀರೇಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪತ್ರಿಕೆಯಲ್ಲಿ ಅಧಿಕೃತ ಪ್ರಕಟಣೆ ಕೊಟ್ಟು ಮತಾಂತರವಾಗಿದ್ದ ಎಚ್.ಆರ್.ಚಂದ್ರಶೇಖರಯ್ಯ, ಮತಾಂತರ ಗೊಂಡು, ಮುಬಾರಕ್ ಪಾಷಾ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಆದರೆ ಸಕ್ಕರೆ ಕಾಯಿಲೆ ಇರೋದ್ರಿಂದಾಗಿ ಮುಂಜಿ ಮಾಡಿಸಿಕೊಳ್ಳಲು ಸಾಧ್ಯವಾಗದೇ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಮುಂಜಿ ಮಾಡಿದ್ರೆ ಮಾತ್ರ ಮುಸ್ಲಿಂಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡೋದು ಎಂದ ಚಂದ್ರಶೇಖರ್, ಸೊಗಡು ಶಿವಣ್ಣರ ಮನವೊಲಿಕೆ ಹಾಗೂ ಮುಂಜಿಗೆ ಅಂಜಿ ತಾನು ವಾಪಸ್ ಬಂದಿದ್ದೇನೆ ಎಂದು ತಿಳಿಸಿದರು.
ಅಣ್ಣತಮ್ಮಂದಿರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿದ್ದ ಚಂದ್ರಶೇಖರ್, ತನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ ಎಂದು ನೊಂದಿದ್ದರು. ಹೀಗಾಗಿ ಮತಾಂತರದ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಮತಾಂತರ ಸುದ್ದಿ ಕೇಳುತಿದ್ದಂತೆ ಮನೆಗೆ ದೌಡಾಯಿಸಿದ ಮಾಜಿ ಸಚಿವ ಸೊಗಡು ಶಿವಣ್ಣ ಚಂದ್ರಶೇಖರ್ ಅವರ ಮನವೊಲಿಸಿದ್ದಾರೆ.
ವರದಿ : ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz