ನಾಗಮಂಗಲ: ಬೆಳ್ಳೂರು ಪೊಲೀಸ್ ಠಾಣೆಯ ಜನ ವಿರೋಧಿ, ಕಾನೂನು ಬಾಹಿರ ನಡುವಳಿಕೆಯನ್ನು ಖಂಡಿಸಿ ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವ ಜನ ಸಮಾಜ ಮತ್ತು ಪ್ರಗತಿಪರ ಎಲ್ಲಾ ಸಂಘಟನೆಗಳ ಒಕ್ಕೂಟ ವತಿಯಿಂದ ಸಾಂಕೇತಿಕ ಕಪ್ಪು ಪಟ್ಟಿ ಧರಿಸಿ ಬೆಳ್ಳೂರು ಕ್ರಾಸ್ ನಿಂದ ಬೆಳ್ಳೂರು ಪೊಲೀಸ್ ಠಾಣೆಯ ತನಕವೂ ಕಾಲುನಡಿಗೆಯಲ್ಲಿ ಜಾಥಾ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವ ಜನ ಸಮಾಜ ಮಂಡ್ಯ ಜಿಲ್ಲಾಧ್ಯಕ್ಷ ಡಿ. ವೆಂಕಟೇಶ್ ಮಾತನಾಡಿ, ಬೆಳ್ಳೂರು ಪೊಲೀಸ್ ಠಾಣೆಗೆ ದೌರ್ಜನ್ಯಕ್ಕೆ ತುತ್ತಾದ ಸಾರ್ವಜನಿಕ ರು ದೂರು ನೀಡಲು ಹೋದಾಗ ದೂರುದಾರರ ಮೇಲೆ ಪೊಲೀಸ್ ದರ್ಪ ತೋರಿಸಿ ದೌರ್ಜನ್ಯಕೋರರ ಪರ ವಕಾಲತ್ತು ವಹಿಸಿ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ಎಸಗುತ್ತಿರುವ ಬೆಳ್ಳೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಲೋಕೇಶ್, ನಾಗರಾಜ್ ಕರ್ತವ್ಯ ಲೋಪ ಎಸಗುತ್ತೀದ್ದಾರೆ. ಆದ್ದರಿಂದ ಈ ಕೊಡಲೇ ಈ ಮೂವರನ್ನು ಅಮಾನತುಗೊಳಿಸ ಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದರು.
ಬೆಳ್ಳೂರು ಪೊಲೀಸ್ ಠಾಣೆಯ ಮುಂದೆ ಮೌನ ಪ್ರತಿಭಟನೆ ನಡೆಸಿದ ನಂತರ ಡಿ.ವೆಂಕಟೇಶ್ ಅವರು PSI ಸಿ.ರವಿಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಪ್ರತಿಭಟನೆಯಲ್ಲಿ ಪುನೀತ್ ರಾಜು, ರಮೇಶ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಮಂಡ್ಯ ಶ್ರೀನಿವಾಸ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz