ಬೆಳಗಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಸ್ಥಾಪನೆಗೊಂಡಾಗಿನಿಂದ ಬಡವರಿಗೆ ಅಕ್ಷಯ ಪಾತ್ರೆಯಾಗಿ ಹೊರಹೊಮ್ಮಿದೆ. ಲಕ್ಷಾಂತರ ಬಡಜನರು ಈ ಗ್ರಾಮಾಭಿವೃದ್ಧಿ ಸಂಘಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇತ್ತಿಚಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಶಾಖೆಗಳು ರಾಜ್ಯಾದ್ಯಂತ ಹರಡಿ ಜನರ ಸೇವೆ ಮಾಡುತ್ತಿವೆ. ತನ್ಮೂಲಕ ಸಮಾಜಕ್ಕೆ ಆದರ್ಶವಾಗಿವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮೊದಗಾ ಹಾಗೂ ಸುಳೇಭಾವಿ ಕಾರ್ಯಕ್ಷೇತ್ರದ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ವರಮಹಾಲಕ್ಷ್ಮೀ ಪೂಜಾ ಹಾಗೂ ಧಾರ್ಮಿಕ ಸಭೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಈ ಸಮಯದಲ್ಲಿ ದತ್ತಾ ಬಂಡಿಗಿಣಿ, ಶಂಕರಗೌಡ ಪಾಟೀಲ, ಲಕ್ಷ್ಮೀ ನಾರಾಯಣ ಕಲ್ಲೂರ, ವಿಠ್ಠಲ ಬಂಡಿಗಿಣಿ, ರುದ್ರಪ್ಪ, ಮಹೇಶ ಸುಗಣೆನ್ನವರ, ದುಗ್ಗೇಗೌಡ, ಪ್ರದೀಪ ಶೆಟ್ಟಿ, ಮಹಾಂತೇಶ ಬಸ್ಸಾಪುರ, ಗೀತ ಹಣಗೋಜಿ, ಶೈಲಾ ವಠಾರೆ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


