ರಾಜ್ಯದ ಹೆಚ್ಚಿನ ಶಿಕ್ಷಕಿಯರಿಗೆ ಅನಾರೋಗ್ಯ ಕಾಡುತ್ತಿದೆ. ಶಿಕ್ಷಣ, ಆರೋಗ್ಯ ಇಲಾಖೆಯ ಜಂಟಿ ಸಮೀಕ್ಷೆಯಲ್ಲಿ ಬಹುತೇಕರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಕಂಡುಬಂದಿದೆ. ಶೇ.06 ಮಂದಿಯಲ್ಲಿ ಸ್ತನ, ಬಾಯಿ, ಗರ್ಭಕೋಶದ ಕ್ಯಾನ್ಸರ್ ಪತ್ತೆಯಾಗಿದೆ. ಒಟ್ಟು 2,20,066 ಸರ್ಕಾರಿ ಶಿಕ್ಷಕರ ಪೈಕಿ 60% ಮಂದಿ ಶಿಕ್ಷಕಿಯರಾಗಿದ್ದಾರೆ. ‘ವ್ಯಾಯಾಮ ಕೊರತೆ, ಕೆಲಸದ ಒತ್ತಡ, ಮನೆಯ ಆರ್ಥಿಕ ಸ್ಥಿತಿಯೇ ಇದಕ್ಕೆ ಕಾರಣ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಒಳ್ಳೆಯದು’ ಎಂಬುದು ವೈದ್ಯರ ಸಲಹೆ.
ಇಂದಿನ ಆಹಾರ ಪದ್ದತಿ, ಮಾನಸಿಕ ಒತ್ತಡ, ಜೀವನ ಶೈಲಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಜನರು ಬಹುಬೇಗ ತುತ್ತಾಗುತ್ತಿದ್ದಾರೆ. ಆರೋಗ್ಯ ತಪಾಸಣೆಗೆ ಒಳಗಾದರೆ ವೈದ್ಯರು ಕಾಯಿಲೆ ಇದೆ ಎಂದು ಎಲ್ಲಿ ಹೇಳಿಬಿಡುತ್ತಾರೋ ಎಂಬ ಭಯದಿಂದಾಗಿ ಬಹಳಷ್ಟು ಜನರು ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೋಗ ಉಲ್ಭಣಿಸಿದ ನಂತರ ಪಡಿಪಾಟಲು ಪಡುವ ಪರಿಸ್ಥಿತಿ ಉಂಟಾಗುತ್ತಿದೆ. ಇದು ಮನುಷ್ಯನ ಆರೋಗ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಪ್ರತಿಯೊಬ್ಬರೂ ಭಯ ತೊರೆದು ವೈದ್ಯಕೀಯ ತಪಾಸಣೆ ನಡೆಸಿಕೊಂಡು ರೋಗ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಪೂರ್ಣಜೀವನ ನಡೆಸುವಂತೆ ಸಲಹೆ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy