ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮಿಷನ್150 ಗುರಿಸಾಧನೆಗೆ ಪಕ್ಷದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳು ಅವಿರತವಾಗಿ ಪರಿಶ್ರಮಿಸಬೇಕೆಂದು ಭಾರತೀಯ ಜನತಾ ಪಾರ್ಟಿ ರಾಜ್ಯ ಮಾಧ್ಯಮ ಸದಸ್ಯ ಬೆಳಗಾವಿ ವಿಭಾಗ ಮಾಧ್ಯಮ ಪ್ರಭಾರಿ ಸಿದ್ದು ಮೊಗಲಿಶೆಟ್ಟರ್ ಹೇಳಿದರು.
ನಗರದಲ್ಲಿ ಬುಧವಾರ ಬೆಳಗಾವಿ ಗ್ರಾಮಾಂತರ ಹಾಗೂ ಮಹಾನಗರ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಪದಾಧಿಕಾರಿಗಳ ತುರ್ತುಸಭೆಯಲ್ಲಿ ಮಾತನಾಡಿ, 2014 ರಲ್ಲಿ ದೇಶದ ಚುಕ್ಕಾಣಿ ಹಿಡಿದ ನರೇಂದ್ರ ಮೊದಿಜಿ ಅತ್ಯಂತ ಉತ್ರಮ ಕಾರ್ಯಗಳನ್ನು ಮಾಡುವ ಮೂಲಕ ಭಾರತವನ್ನು ಜಗದ್ಗುರು ಸ್ಥಾನದಲ್ಲಿ ತಂದು ನಿಲ್ಲಿಸಿದ್ದಾರೆ.
ಬರುವ ಎರಡು ವರ್ಷಗಳಲ್ಲಿ ರಾಜ್ಯದ ಮತ್ತು ಕೇಂದ್ರದ ಚುನಾವಣೆ ಬರಲಿದ್ದು ಅವುಗಳ ಗೆಲುವಿಗೆ ನಾವೆಲ್ಲರು ಹೆಚ್ಚಿನ ಶ್ರಮ ವಹಿಸಬೇಕಾಗಿದೆ. ಈ ಹಿಂದೆಯು ಸಹಿತ ಪಕ್ಷದ ಕಾರ್ಯಕರ್ತರು ನಿಸ್ವಾರ್ಥವಾಗಿ ಪಕ್ಷಕ್ಕಾಗಿ ದುಡಿದ ಪ್ರತಿಫಲವಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಕಾರ್ಯಯೊಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಪ್ರಚಾರ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಕಾರ್ಯಕರ್ತರು ಮನೆಮನೆಗೆ ತೆರಳಿ ಸೇವೆ ನೀಡುವಂತೆ ಕರೆ ಕೊಟ್ಟರು.
ಸಭೆಯಲ್ಲಿ ಉಪಸ್ಥಿತಿ ಇದ್ದ ರಾಜ್ಯ ಸಾಮಾಜಿಕ ಜಾಲತಾಣ ಸಮಿತಿ ಸದಸ್ಯ ರಾಘವೇಂದ್ರ ನಾಗೂರ ಮಾತನಾಡಿ, ಪಕ್ಷ ಸಂಘಟನೆ ಹಾಗೂ ಸರ್ಕಾರದ ಯೋಜನೆಗಳ ಪ್ರಚಾರದ ಬಗ್ಗೆ ವಿಸ್ತೃತ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ಕಾರ್ಯಕರ್ತರಿಗೆ ಇರುವ ಗೌರವ ಬಿಜೆಪಿ ಬಿಟ್ಟರೆ ಬೇರೆ ಯಾವ ಪಕ್ಷದಲ್ಲಿಯು ಇಲ್ಲ. ಕಾರ್ಯಕರ್ತರೆ ಬಿಜೆಪಿಗೆ ಜೀವಾಳವಾಗಿದ್ದು ಪಕ್ಷದ ಸಂಘಟನೆ ಕಾರ್ಯಕರ್ತರ ಪರಿಶ್ರಮದ ಮೇಲೆ ನಿಂತಿದ್ದು ಬೂತ್ ಮಟ್ದದಿಂದ ಪಕ್ಷವನ್ನು ಸಂಘಟಿಸಿ ಸರ್ಕಾರದ ಎಲ್ಲ ಯೋಜನೆಗಳ ಪ್ರಚಾರ ಹಾಗೂ ಜನ ಸಾಮನ್ಯರಿಗೆ ಮುಟ್ಟಿಸುವತ್ತ ಗಮನ ಹರಿಸಬೇಕೆಂದರು.
ಜಿಲ್ಲಾ ಮಾಧ್ಯಮ ಸಂಚಾಲಕ ಶರದ್ ಪಾಟೀಲ, ಎಫ್. ಎಸ್. ಸಿದ್ದನಗೌಡರ, ವಕ್ತಾರ ಸಂಜಯ ಕಂಚಿ, ಸಾಮಾಜಿಕ ಜಾಲತಾನದ ಜಿಲ್ಲಾ ಸಂಚಾಲಕ ನಿತೀನ ಚೌಗುಲೆ, ಕೇದಾರ ಜೋರಾಪೂರ, ನಿತೀನ ಚೌಗುಲೆ, ಸಹ ಸಂಚಾಲಕ ಸಂತೋಷ್ ದೇಶನೂರ್, ಸಹ ವಕ್ತಾರರಾದ ಶಶಿ ಬಾಡಕರ, ಮಾಧ್ಯಮ ಸಹ ಪ್ರಮುಖ ಪ್ರಜ್ವಲ ಅಥಣಿಮಠ, ಶೈಲೆಶ್ ಶೆಟ್ಟಿ, ಮಂಜುನಾಥ ಭಜಂತ್ರಿ,ಇಂದಿರಾ ಬಾಳಿಕಾಯಿ, ಸಂತೋಷ ಬಾಳೆಕುಂದ್ರಿ, ಜಿಲ್ಲಾ ಸಮಿತಿ ಸದಸ್ಯರಾದ ಬಸವರಾಜ ಇಟ್ನಾಳ, ಮಹಾಂತೇಶ ವಕ್ಕುಂದ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy