ತುಮಕೂರು: ಇಲಾಖೆ ಪರ್ಮಿಷನ್ ತೆಗೆದುಕೊಂಡು ಮದರಸ ನಡೆಯುತ್ತಿದೆ. ಹೇಗೆ ಬೇರೆ ಬೇರೆ ಶಾಲೆಗಳ ಪರಿಸ್ಥಿತಿಗಳನ್ನ ಅವಲೋಕನ ಮಾಡ್ತೀವೋ ಹಾಗೇ ಮದರಸ ಕೂಡ ಮಾಡ್ತೀವಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸಗಳ ಬಗ್ಗೆ ಪೋಷಕರಿಂದ ದೂರು ಇತ್ತು. ಅಲ್ಲಿ ಬೇರೆ ಬೇರೆ ವಿಷಯಗಳನ್ನ ಕಲಿಸುತ್ತಿಲ್ಲ ಅಂತಾ ದೂರು ಇತ್ತು. ಹಾಗಾಗಿ ಅಧಿಕಾರಿಗಳು ಹೋಗಿ ಚೆಕ್ ಮಾಡಿದ್ದಾರೆ. ವಸ್ತುಸ್ಥಿತಿ ಅರಿಯಲು ಅಧಿಕಾರಿಗಳನ್ನ ಕಳಿಸಿದ್ದೇನೆ ಎಂದರು.
ಮದರಸದ ಮಕ್ಕಳನ್ನು ಇತರೆ ಮಕ್ಕಳ ಸಮಾನಕ್ಕೆ ತರಲು ಪ್ರಯತ್ನಿಸುತ್ತೇವೆ. 20 ಸಾವಿರ ಅಂಗನವಾಡಿಗಳಲ್ಲಿ ಎನ್.ಇ.ಪಿ. ಜಾರಿ ತರುತ್ತೇವೆ. ಮದರಸದಿಂದ ಬಂದ ವಿದ್ಯಾರ್ಥಿಗಳಿಗೆ ಗುಣಮಟ್ಟ ಇಲ್ಲಾ ಅಂತಾ ಮಕ್ಕಳು ಹೇಳಿಕೊಳ್ತಿದ್ದರು. ಮೇಲಿನ ತರಗತಿ ಪಾಠ ಅರ್ಥ ಆಗಲ್ಲ ಅಂತಾ ಹೇಳುತ್ತಿದ್ದರು ಎಂದು ಬಿ.ಸಿ.ನಾಗೇಶ್ ಹೇಳಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy