ಚಿತ್ರದುರ್ಗ: ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ .
ಇತ್ತ ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧವೂ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ. ಇದರ ನಡುವೆ ಮುರುಘಾ ಶ್ರೀಗಳ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಮುರುಘಾ ಮಠದಲ್ಲಿ ಶ್ರೀಗಳು ಸಲಹಾ ಸಮಿತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮುರುಘಾಶ್ರೀ, ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದು ಆಪ್ತರೆದುರು ಮನದ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಸಲಹಾ ಸಮಿತಿ ಸಭೆಯಲ್ಲಿ ಭಕ್ತರು, ವಕೀಲರು, ವಿವಿಧ ಸಮಾಜಗಳ ಮುಖಂಡರು ಸೇರಿ ಹಲವರು ಭಾಗಿಯಾಗಿದ್ರು. ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಮುಖಂಡರು, ನೇರವಾಗಿ ಮಾಜಿ ಶಾಸಕ ಬಸವರಾಜನ್ ವಿರುದ್ಧ ಷಡ್ಯಂತ್ರದ ಆರೋಪ ಮಾಡಿದ್ದಾರೆ.
ಆದರೆ ಮುರುಘಾಶ್ರೀ, ಸಭೆಯಲ್ಲಿ ತಮ್ಮ ಆಪ್ತರೆದುರು ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದಿದ್ದಾರೆ. ತಪ್ಪು ಒಪ್ಪಿಕೊಂಡು ಬಂದರೆ ಕ್ಷಮಿಸಿ ಸಂಧಾನ ಮಾಡೋಣ. ಕಾನೂನು ಸಮರಕ್ಕೆ ಸೈ ಅಂದ್ರೆ ಕಾನೂನು ಮೂಲಕವೇ ಹೋರಾಟ ಮಾಡೋಣಾ ಎಂದು ಆಪ್ತರೆದುರು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


