ದೇಶದಾದ್ಯಂತ ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಗಣೇಶ ವಿಗ್ರಹ ಮೂರ್ತಿಗಳ ಬೇಡಿಕೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ವಿಶೇಷ ರೀತಿಯ ಗಣಪತಿ ವಿಗ್ರಹ ಮೂರ್ತಿ ಗಳಿಗೆ ಭಾರಿ ಬೇಡಿಕೆ ಇದೆ. ಇತ್ತ ತಿಪಟೂರಿನಲ್ಲಿ ಈ ಬಾರಿ ಪುನೀತ್ ರಾಜ್ ಕುಮಾರ್ ರವರೊಂದಿಗೆ ಇರುವ ಗಣಪತಿ ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಡಾ.ರಾಜ್ ಪುನೀತ್ ರಾಜ್ ಕುಮಾರ್ ರವರ ಗೆಳೆಯರ ಬಳಗದ ವತಿಯಿಂದ ಈ ಬಾರಿ ತಿಪಟೂರಿನಲ್ಲಿ ಪುನೀತ್ ರಾಜ್ ಕುಮಾರ್ ರೊಂದಿಗೆ ಇರುವ ಗಣಪತಿಯನ್ನು ಮಾಡಿಸಿ ವಿಶೇಷ ಉತ್ಸವಕ್ಕೆ ಯುವಕರು ತಯಾರಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಗೆಳೆಯರ ಬಳಗದ ಸದಸ್ಯ ಸೂರ್ಯಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿಯ ಗಣೇಶೋತ್ಸವ ನಮ್ಮ ಪುನೀತ್ ಅಣ್ಣನವರು ಇಲ್ಲದ ಕಾರಣ ಅವರ ಸ್ಮರಣಾರ್ಥವಾಗಿ ಗಣಪತಿಯೊಂದಿಗೆ ಅವರ ವಿಗ್ರಹ ಮೂರ್ತಿಯನ್ನು ಮಾಡಿಸಲಾಗಿದೆ ಎಂದು ತಿಳಿಸಿದರು.
ಗಣಪತಿ ವಿಗ್ರಹ ಮೂರ್ತಿ ಮಾಡಿದ ಚೇತನ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ನಾವು ನಮ್ಮ ತಂದೆ ಕಳೆದ ಮೂವತ್ತು ವರ್ಷಗಳಿಂದ ಗಣಪತಿಗಳನ್ನು ಮಾಡಿಕೊಂಡು ಬಂದಿದ್ದು, ತಿಪಟೂರು ಗಣಪತಿಯನ್ನು 2 ವರ್ಷಗಳಿಂದ ನಾನೇ ಮಾಡುತ್ತಿದ್ದೇನೆ. ಈ ಬಾರಿಯ ವಿಶೇಷವೇನೆಂದರೆ ಪುನೀತ್ ರಾಜ್ ಕುಮಾರ್ ರವರೊಂದಿಗೆ ಇರುವ ಗಣಪತಿಗೆ ಭಾರೀ ಬೇಡಿಕೆ ಇದೆ ಎಂದು ತಿಳಿಸಿದರು.
ಇನ್ನೂ ತಿಪಟೂರಿನಲಿ ಈ ಬಾರಿ ನೂರಕ್ಕೂ ಹೆಚ್ಚು ವಿವಿಧ ಜಾಗಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz