ಚಿತ್ರದುರ್ಗ : ಅಜ್ಜ, ಅಜ್ಜಿ ಕುಡಿಸಿದ ಭಂಡಾರದ ನೀರು ಕುಡಿದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಓಬಳೇಶ್ (5), ಬಿಂದು (3) ಮೃತಪಟ್ಟ ದುರ್ದೈವಿ ಮಕ್ಕಳು, ನಿನ್ನೆ ರಾತ್ರಿ ಇಬ್ಬರು ಮಕ್ಕಳು ವಾಂತಿ ಮಾಡಿಕೊಂಡಿದ್ದರು.
ಅಜ್ಜ ದುರ್ಗಪ್ಪ ಮತ್ತು ಅಜ್ಜಿ ರೇಣುಕಾ ಭಂಡರಾದ ನೀರನ್ನು ಮಕ್ಕಳಿಗೆ ಕುಡಿಸಿದ್ದರು. ಆದರೆ ಮಕ್ಕಳು ಬೆಳಗಾಗುವುದರೊಳಗೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಗೆ ಮಕ್ಕಳ ತಾಯಿ ಕಾವೇರಿ ದೂರು ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz