ಶಿವಮೂರ್ತಿ ಶರಣರ ಬಂಧನದ ಬೆನ್ನಲ್ಲೇ ಮುರುಘಾ ಮಠದಿಂದ ತಮಗೆ ನೀಡಲಾಗಿದ್ದ ಬಸವ ಶ್ರೀ ಪ್ರಶಸ್ತಿಯನ್ನು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಹಿಂದಿರುಗಿಸಲು ನಿರ್ಧರಿಸಿದ್ದು, ಇದರ ಜೊತೆಗೆ ಕೊಟ್ಟ 5 ಲಕ್ಷ ರೂಪಾಯಿಗಳ ಚೆಕ್ ಸಹ ಮರಳಿಸುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಶ್ರೀಗಳ ಕುರಿತ ಆರೋಪಗಳನ್ನು ಮಾಧ್ಯಮಗಳಲ್ಲಿ ನೋಡಿ ವಿಚಲಿತನಾಗಿದ್ದೇನೆ.
ಮಕ್ಕಳ ಮೇಲೆ ದೌರ್ಜನ್ಯವೆಸಗಿರುವ ಕೃತ್ಯವನ್ನು ಖಂಡಿಸಲು ಶಬ್ದಗಳು ಸಾಕಾಗುವುದಿಲ್ಲ. ಈ ಪ್ರಕರಣದ ಸಂತ್ರಸ್ತ ಬಾಲಕಿಯರ ಜೊತೆ ನಾವಿದ್ದೇವೆ. ಆ ಬಾಲಕಿಯರಿಗೆ ನ್ಯಾಯ ಸಿಗಬೇಕು ಎಂದು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz