ಬೆಳಗಾವಿ: ನಗರದಲ್ಲಿ ಎರಡು ವರ್ಷಗಳ ನಂತರ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
ಬೆಳಗಾವಿ ಜನತೆಗೆ ಗಣೇಶ್ ಉತ್ಸವ ಒಂದು ವಿಶೇಷ ಹಬ್ಬವಾಗಿದ್ದು, ಎಲ್ಲಿ ಎಲ್ಲಾ ಸಮುದಾಯದ ಜನ ಸೇರಿ ಈ ಉತ್ಸವವನ್ನು ಆಚರಣೆ ಮಾಡುತ್ತಾರೆ. ಬೆಳಗಾವಿ ಗಣೇಶ್ ಉತ್ಸವ ತನ್ನದೇ ಆದ ಇತಿಹಾಸವನ್ನು ಹೊಂದಿದೆ.
1906ರಲ್ಲಿ ಸ್ವತಂತ್ರ ಹೋರಾಟಗಾರರಾದ ಬಾಲ್ ಗಂಗಾಧರ್ ತಿಲಕ್ ಅವರು ಸ್ವತಂತ್ರದ ಸಂಗ್ರಾಮದಲ್ಲಿ ಸಾರ್ವಜನಿಕರು ಭಾಗವಹಿಸಲು ಮತ್ತು ದೇಶವನ್ನು ಸ್ವಾತಂತ್ರ್ಯಗೊಳಿಸಲು ಧಾರ್ಮಿಕ ಆಚರಣೆ ಮತ್ತು ಹಬ್ಬಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಂಡು ಅದರ ಅಂಗವಾಗಿ ಬೆಳಗಾವಿಯಲ್ಲಿ ಗಣೇಶ್ ಉತ್ಸವ ಪ್ರಾರಂಭಿಸಿದರು.
ಈಗ 125 ವರ್ಷಗಳ ಕಳೆದು ತನ್ನ ಇತಿಹಾಸ ಪ್ರದರ್ಶನ ಮಾಡುತ್ತಾ ಇದೆ. ಈ ಸಂದರ್ಭದಲ್ಲಿ ಬೆಳಗಾವಿ ಪ್ರತಿ ಗಲ್ಲಿಗಳಲ್ಲಿ ಸಾರ್ವಜನಿಕ ಗಣಪತಿ ಮಂಟಪಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹತ್ತು ದಿನಗಳ ಕಾಲವರೆಗೆ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾ ಇದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಾಡ್೯ ನಂ 44 ಸೇವಕರಾದ ಶ್ರೇಯಸ್ ನಕಾಡಿ ಅವರು ಪಂಚಾಯತ ಸ್ವರಾಜ್ ಸಮಾಚಾರ ಸುದ್ದಿ ವಾಹಿನಿ ಜೊತೆ ಮಾತನಾಡಿ, ಶಾಹೂ ನಗರ ಗಣೇಶ್ ಉತ್ಸವ ಮಂಡಲ್ ವತಿಯಿಂದ ಮಹಾಪ್ರಸಾದ್ ಮತ್ತು ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಈ ಸಂದರ್ಭದಲ್ಲಿ ಜರುಗಲಿವೆ ಎಂದು ಮಾಹಿತಿ ನೀಡಿದರು. ಈ ಹಬ್ಬ ಬೆಳಗಾವಿ ನಗರದ ಜನತೆಗೆ ವಿಶಿಷ್ಟವಾಗಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy