ವಿಜಯಪುರ: ಅಣ್ಣನನ್ನು ತಮ್ಮ ಬರ್ಬರವಾಗಿ ಹತ್ಯೆಗೈದ ಘಟನೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಜಗ್ಗೇಶ್ ವಡ್ಡರ್ (30) ಹತ್ಯೆಯಾದ ದುರ್ದೈವಿ. ರಾಹುಲ್ ವಡ್ಡರ್ ಕೊಲೆ ಆರೋಪಿ. ನಿತ್ಯ ಮದ್ಯ ಸೇವಿಸಲು ತಮ್ಮನ ಬಳಿ ಅಣ್ಣ ಜಗ್ಗೇಶ್ ಹಣವನ್ನ ಕೇಳುತ್ತಿದ್ದನಂತೆ. ಅಣ್ಣನ ಕಾಟಕ್ಕೆ ರೋಸಿಹೋಗಿದ್ದ ತಮ್ಮ ರಾಹುಲ್, ನಿನ್ನೆ ರಾತ್ರಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಹಣದ ವಿಚಾರಕ್ಕೆ ರಾತ್ರಿ ಇಬ್ಬರ ಮಧ್ಯೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಆಯುಧದಿಂದ ಇರಿದು ಅಣ್ಣನ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


