ಮಹಾನಗರ ಪಾಲಿಕೆ ಚುನಾವಣೆಯ ನಡೆದು ಒಂದು ವರ್ಷ ಕಳೆದರೂ ಮಹಾಪೌರ ಮತ್ತು ಉಪ ಮಹಾಪೌರರ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರ ಸದಸ್ಯರುಗಳು ಬಿಜೆಪಿ ಸರಕಾರದ ವಿರುದ್ಧ ಕೇಕ್ ಕತ್ತರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ಚುನಾಯಿತಗೊಂಡ ಮಹಾನಗರ ಸದಸ್ಯರುಗಳು ಕಳೆದ ಒಂದು ವರ್ಷಗಳಿಂದ ಜನರ ಯಾವುದೇ ರೀತಿಯ ಕೆಲಸ ಕಾರ್ಯಗಳು ಆಗುತ್ತಿಲ್ಲ ಮತ್ತು ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ಉತ್ತರ ಕೊಡುವುದು ಬಹಳ ಕಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.
ನಮ್ಮಗೆ ನಗರಸಭೆಯ ಸದಸ್ಯರುಗಳಿಗೆ ಚುನಾವಣೆಗಳಲ್ಲಿ ಮತ ಚಲಾಯಿಸುವುದು. ರಾಜಕೀಯ ಉದ್ದೇಶದಿಂದ ನಮ್ಮನ್ನು ಬಳೆಸಿಕೂಡರು. ಆದರೆ ಜನರ ಸೇವೆ ಮಾಡಲು ನಮಗೆ ಆಗುತ್ತಾ ಇಲ್ಲ ಎಂದು ಸಂದರ್ಭದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಇನ್ನು ಸದಸ್ಯರು ಪ್ರತಿಭಟನೆ ಮಾಡುವ ವೇಳೆ ಮಹಾನಗರ ಪಾಲಿಕೆ ಆವರಣದಲ್ಲಿ ಯಾವುದೇ ರೀತಿ ಪ್ರತಿಭಟನೆ ಮಾಡಬಾರದೆಂದು ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ್ ಘಾಳಿ ಸದಸ್ಯರುಗಳನ್ನು ಹೊರ ಹೋಗಲು ಆದೇಶಿಸಿದರು.
ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ಕಾರ್ಪೊರೇಟರ್ ಗಳು ನಾವು ಮಹಾನಗರ ಪಾಲಿಕೆಯ ಆವರಣದಲ್ಲಿ ಪ್ರತಿಭಟನೆ ಮಾಡುವುದಿಲ್ಲ ನಾವು ಆಯ್ಕೆ ಆದ ಬಗ್ಗೆ ಸಂಭ್ರಮ ಆಚರಣೆ ಮಾಡುತ್ತೇವೆ ಎಂದು ಆಯುಕ್ತರ ಜೊತೆಗೆ ವಾಗ್ವಾದಕ್ಕೆ ಇಳಿದರು.
ನಂತರ ಆಯುಕ್ತರು ನಗರಸೇವಕರುಗಳಿಗೆ ಮನವಿ ಮಾಡಿ ಯಾವುದೇ ರೀತಿಯ ಪ್ರತಿಭಟನೆ ಪಾಲಿಕೆಯ ಆವರಣದಲ್ಲಿ ಮಾಡಬೇಡಿ ಎಂದರು. ಸಾರ್ವಜನಿಕ ಕೆಲಸವಿದ್ದರೇ ನೀವು ಪಾಲಿಕೆಯ ಒಳಗಡೆ ಬಂದು ಕೆಲಸ ಮಾಡಿಕೊಂಡು ಹೋಗಿ ಎಂದು ಹೇಳಿ ಮನವಿ ಮಾಡಿಕೊಂಡರು. ಆದರೆ ಇದಕ್ಕೂ ಒಪ್ಪದ ಸದಸ್ಯರು ಮಹಾನಗರ ಪಾಲಿಕೆಯ ಆವರಣದಲ್ಲಿ ಕೇಕ್ ಕತ್ತರಿಸುವ ಮೂಲಕ ಆಕ್ರೋಶ ಹೊರಹಾಕಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy