ಭಾರತೀಯ ಜೀವ ವಿಮಾ ಪ್ರತಿನಿಧಿಗಳು ತಿಪಟೂರು ಜೀವ ವಿಮಾ ಕಚೇರಿ ಮುಂದೆ ತಿಪಟೂರು ಘಟಕದ ಜೀವ ವಿಮಾ ಪ್ರತಿನಿಧಿಗಳ ಅಧ್ಯಕ್ಷ ಬಿ.ಪಿ.ಜಯಪ್ಪ ನೇತೃತ್ವದಲ್ಲಿ ಸಾಂಕೇತಿಕವಾಗಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಪ್ರೀಮಿಯಂದಾರರು ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ, ಪ್ರೀಮಿಯಂ ಮೇಲಿನ ಜಿಎಸ್ ಟಿ ಹಿಂತೆಗೆತ ಹಾಗೂ ವಿಮಾ ಏಜೆಂಟ್ ಗಳ ಮೆಡಿಕ್ ಲೈನ್ ಪಿಂಚಣಿ ಸೌಲಭ್ಯ ಗ್ರಾಜುವಿಟಿ ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಶಾಖ ಘಟಕದ ಅಧ್ಯಕ್ಷರಾದ ಬಿ.ಪಿ.ಜಯಪ್ಪ, ಉಪಾಧ್ಯಕ್ಷರಾದ ಹಾಲುಗೋಣ ಶಿವಾನಂದ್, ಗೊರಗುಂಡನಹಳ್ಳಿ ಗೋವಿಂದಪ್ಪ, ವಿದ್ಯಾಧರ ಸೇರಿದಂತೆ ಹಲವಾರು ಏಜೆಂಟ್ ಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz