ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದಾದಲ್ಲಿ ಬಲಭೀಮೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕುರಕುಂದಾ ಪ್ರೀಮಿಯರ್ ಲೀಗ್ -02 ಸೀಜನ್ ಕ್ರಿಕೇಟ್ ಪಂದ್ಯಾವಳಿಯನ್ನು, ಬಿಜೆಪಿ ಯುವ ಮುಖಂಡರಾದ ಮಹೇಶರೆಡ್ಡಿ ಮುದ್ನಾಳ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು… “ಯುವಕರು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು ಮತ್ತು ಪಾಠದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಕಲೆ, ಕ್ರೀಡಾ ಪ್ರತಿಭೆ ಇರುತ್ತದೆ. ಅದನ್ನು ವೇದಿಕೆಗಳಲ್ಲಿ ಹಾಗೂ ಆಟೋಟಗಳಲ್ಲಿ ಪ್ರದರ್ಶನ ಮಾಡಬೇಕು.
ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಸೌಹಾರ್ದದಿಂದ ಭಾಗವಹಿಸಬೇಕು. ಎಲ್ಲರೂ ಶಾಲೆ, ಕಾಲೇಜುಗಳಿಗೆ ತಪ್ಪದೇ ಹಾಜರಾಗಬೇಕು. ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣ ಬಿಡುತ್ತಿರುವದು ಆತಂಕಕಾರಿ ಬೆಳವಣಿಗೆ, ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಭ್ಯಾಸದ ಅವದಿಯಲ್ಲಿ ಉತ್ತಮವಾಗಿ ಓದಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಬಿಜೆಪಿ ಯುವ ಮುಖಂಡರಾದ ಮಹೇಶರೆಡ್ಡಿ ಗೌಡ ಮುದ್ನಾಳ, ದಿವ್ಯ ಸಾನಿಧ್ಯವಹಿಸಿದ ಶ್ರೀ ಬಸಲಿಂಗಯ್ಯ ಸ್ವಾಮಿ ಹೀರೆಮಠ, ಶ್ರೀ ಗುರುಲಿಂಗಯ್ಯಸ್ವಾಮಿ ಗುರುಸ್ಥಲ ಮಠ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿನೋದ ಗುರಿಕಾರ, ಉಪಾಧ್ಯಕ್ಷರಾದ ಬಸವರಾಜ ಗೌಡ ಪದ್ದಿ, ಬಸವರಾಜಪ್ಪ ಗೌಡ ಮಾಲಿ ಪಾಟೀಲ್, ಸಿದ್ದಣ್ಣಗೌಡ ಪೊಲೀಸ್ ಪಾಟೀಲ್, ಬಿಜೆಪಿ ಯುವ ಮುಖಂಡ ರವಿ ದೇಸಾಯಿ, ಮಲ್ಲಣ್ಣ ಗೌಡ ಶಿವಪ್ಪಗೌಡ್ರು, ರಾಜಶೇಖರ ಅವಂಟಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಶರಣಪ್ಪ ಹಾವಣ್ಣೊರ, ಸಾಬಣ್ಣ ವಗ್ಗರ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಗ್ರಾಪಂ ಮಾಜಿ ಉಪಾಧ್ಯಕ್ಷ ಮಲ್ಲು ಹಲಗಿ, ಮಲ್ಲಿಕಾರ್ಜುನ ಗೋಸಿ, ಯಲಪ್ಪ ಲಕ್ಷಂಪೂರ, ಗ್ರಾಮದ ಎಲ್ಲಾ ಗಣ್ಯವ್ಯಕ್ತಿಗಳು ಹಾಗೂ ಇನ್ನಿತರರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy