ಮಕ್ಕಳ ಕಳ್ಳತನ ಮಾಡಲು ಯತ್ನಿಸಿದರು ಎಂಬ ಸಂಶಯದಿಂದ ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಮರಿಗೇರಿ- ಇಟಗಾ ಗ್ರಾಮದಲ್ಲಿ ನಡೆದಿದೆ.
ಇನ್ನೂ ಮೂವರು ಪರಾರಿಯಾಗಿದ್ದಾರೆ. ರಗ್ಗು, ಬೆಡ್ ಸೀಟ್, ಪ್ಲಾಸ್ಟಿಕ್ ಬುಟ್ಟಿಗಳನ್ನು ಮಾರಲು ಆರು ಜನ ವಾಹನದಲ್ಲಿ ಬಂದಿದ್ದರು.
ಈ ವೇಳೆ ರಸ್ತೆ ಬದಿ ಸೈಕಲ್ ಓಡಿಸುತ್ತಿದ್ದ ಬಾಲಕನನ್ನು ವಾಹನದಲ್ಲಿ ಹತ್ತಿಸಿಕೊಳ್ಳಲು ಯತ್ನಿಸಿದರು. ಇದರಿಂದ ಕಿರುಚಿದ 12 ವರ್ಷದ ಬಾಲಕ ಮನೆಗೆ ಓಡಿದ. ಇದನ್ನು ಕಂಡು ಊರಿನ ಜನ ಗುಂಪಾಗಿ ಸೇರಿದರು. ತನ್ನನ್ನು ಎಳೆದುಕೊಂಡು ಹೋಗಲು ಯತ್ನಿಸಿದರು ಎಂದು ಬಾಲಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಜನಸೇರಿರುವುದನ್ನು ಕಂಡು ಮೂವರು ಪರಾರಿಯಾಗಿದ್ದು, ಮೂವರನ್ನು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ತಾವು ಉತ್ತರ ಪ್ರದೇಶದಿಂದ ವ್ಯಾಪಾರ ಮಾಡುತ್ತ ಊರೂರು ಅಲೆಯುವುದಾಗಿ ಆರೋಪಿಗಳು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz