ಶ್ರೀ ವಿನಾಯಕ ಯುವಕರ ಸಂಘ ಅರಕೆರೆ ತುಮಕೂರು ಜಿಲ್ಲೆ ಕಸಬಾ ಹೊಬಳಿ ಯುವಕರ ಸಂಘದ ವತಿಯಿಂದ ಅದ್ದೂರಿ ಗಣೇಶ ವಿಸರ್ಜನೆ ನಡೆಯಿತು.
ಎಲ್ಲಾ ಮುಂಜಾಗ್ರತೆ ವಹಿಸಿಕೊಂಡು ಗಣೇಶ ವಿಸರ್ಜನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅರಕೆರೆ ಟಿ.ಅರ್.ರವೀಶ್ ಹಾಗೂ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಲ್ಮಾ ಆರಿಫ್, ಉಪಾಧ್ಯಕ್ಷರಾದ ನಾಗರತ್ನಮ್ಮ ಮತ್ತು ಸದಸ್ಯರಾದ ಅನಿಲ್ ಪಾಟೀಲ್, ಶಿವಕುಮಾರ್, ನರಸಿಂಹರಾಜು, ನವೀನ್, ಕುಮಾರಣ್ಣ, ಸಂಜೀವಮ್ಮ, ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಗ್ರಾಮದ ಯುವಕರು, ಮಹಿಳೆಯರು, ಪುಟ್ಟ ಮಕ್ಕಳು, ಹಿರಿಯರು ತುಂತುರು ಮಳೆಯನ್ನು ಲೆಕ್ಕಿಸದೆ ವಾದ್ಯಕ್ಕೆ ತಕ್ಕಂತೆ ನೃತ್ಯ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz