ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ದಾಖಲೆ ನೀಡಿದೆ ಇರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ 50 ಕೋಟಿ. ರೂ ಮಾನನಷ್ಟ ಮೊಕದ್ಧಮೆ ಹಾಕುತ್ತೇನೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮುನಿರತ್ನ, 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. 1 ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಸಿಎಂ ಕರೆದು ಮಾತನಾಡಿದರು. ಇತ್ತೀಚೆಗೆ ಸಿದ್ಧರಾಮಯ್ಯ ಮನೆಗೆ ಹೋಗಿ ಆರೋಪ ಮಾಡಿದ್ಧರು. ಲೋಕಾಯುಕ್ತಗೆ ದಾಖಲೆ ಕೊಡಿ ಎಂದಿದ್ದೇನೆ ಕೆಂಪಣ್ಣ ಎಲ್ಲಿಯೂ ದಾಖಲೆ ನೀಡಿಲ್ಲ. ಕೆಂಪಣ್ಣ ದಾಖಲೆ ಇದ್ದರೇ ಕೊಡಬೇಕು ಇಲ್ಲದಿದ್ದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನವರ ಬಳಿ ಯಾವುದೇ ದಾಖಲೆ ಇಲ್ಲ.ಸದನದಲ್ಲಿ ಸಿದ್ಧರಾಮಯ್ಯ ದಾಖಲೆ ಇಟ್ಟುಕೊಂಡು ಮಾತನಾಡಿಲಿ. ಕೆಂಪಣ್ಣ ಆರೋಪದಿಂದ ನಮಗೆ ಕೆಟ್ಟ ಹೆಸರು ಬಂದಿದೆ. ಕೋ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಸಚಿವ ಮುನಿರತ್ನ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy