ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ 60 ವರ್ಷಗಳ ಕಾಂಗ್ರೆಸ್ ಪಕ್ಷ ದೇಶ ನೀಡಿರುವ ಕೊಡುಗೆಗಳ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಪರವಾಗಿರುವ ಪಕ್ಷ, ದೇಶದ ಅಖಂಡತೆಯನ್ನು ಕಾಪಾಡಿರುವಂತ ಪಕ್ಷವಾಗಿದೆ. ಬೆಳಗಾವಿ ಭಾಷೆ ರಾಜಕಾರಣವಾಗಿತ್ತು.
ಆದರೆ ಈಗ ಶಾಸಕಿ ಅಂಜಲಿ ನಿಂಬಾಳ್ಕರ್ ಅಭಿವೃದ್ಧಿ ಕಾರ್ಯದಿಂದಾಗಿ ಕ್ಷೇತ್ರದಲ್ಲಿ ಜನ ಅಭಿವೃದ್ಧಿ ಪರವಾಗಿ ನಿಂತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಮೂರು ಪಕ್ಷಗಳಿಂದ ಕಾರ್ಯಕರ್ತರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ.
ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ನನ್ನ ಕ್ಷೇತ್ರ ಯಾವುದೇ ಭಾಷೆ ಮತ್ತು ಜಾತಿ ರಾಜಕಾರಣ ಮಾಡಿಲ್ಲ ನನಗೆ ಕನ್ನಡ ಮತ್ತು ಮರಾಠಿ ಜನರ ಅಪಾರ ಪ್ರೀತಿ ನನಗೆ ಸಿಕ್ಕಿದೆ. ಅವರ ಆಶೀರ್ವಾದದಿಂದಾಗಿ ನಾನು ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಾಡಲು ಸಾಧ್ಯವಾಗಿದೆ. 100 ಹಾಸಿಗೆಗಳ ಆಸ್ಪತ್ರೆ ಆಗಿರಬಹುದು ಬಸ್ ನಿಲ್ದಾಣವಾಗಿರಬಹುದು ಕೋವಿಡ್ ಸಮಯದಲ್ಲಿ ನನ್ನ ಕ್ಷೇತ್ರ ಕಡಿಮೆ ಹಾನಿ ಉಂಟಾಗಿದ್ದು ನನಗೆ ಸಮಾಧಾನ ತಂದಿದೆ.
ಕಾಂಗ್ರೆಸ್ ಪಕ್ಷದಿಂದಲೇ ದೇಶದ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿ ಆಗಲು ಸಾಧ್ಯ ಎಂದು ನನ್ನ ವಿಶ್ವಾಸವಾಗಿದೆ. ಈ ಸಂದರ್ಭದಲ್ಲಿ ಅನೇಕ ವಿರೋಧ ಪಕ್ಷಗಳು ಕಾಂಗ್ರೆಸ್ ಪಕ್ಷದ ಕೊಡುಗೆಗಳ ಬಗ್ಗೆ ಪ್ರಶ್ನೆಯನ್ನು ಮಾಡುತ್ತಾರೆ.
ಆ ಕೊಡುಗೆಯಲ್ಲಿಯೇ ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಕಾಂಗ್ರೆಸ್ ಕಟ್ಟಿರುವ ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ತಮ್ಮ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆದಿದ್ದಾರೆ. ಇದನ್ನು ನಾನು ಅವರಿಗೆ ನೆನಪಿಸಲು ಇಚ್ಛೆಪಡುತ್ತೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy