ವಿಜಯನಗರ: ಗಂಡನೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿ ನಡೆದಿದೆ.
ದೀಪಾ (22) ಕೊಲೆಯಾದವರು. ಬ್ಯಾಸಿಗಿದೇರಿ ಗ್ರಾಮದ ನಿವಾಸಿ ರವಿ (27) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಕಳೆದ 10 ತಿಂಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ನಡುವೆ ಆಗಾಗ ಮನಸ್ತಾಪ ಉಂಟಾಗುತಿತ್ತು. ಪತ್ನಿ ತಮ್ಮ ಸಂಬಂಧಿಯೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಪತ್ನಿ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಮಧ್ಯಾಹ್ನ ಜಗಳ ತಾರಕಕ್ಕೇರಿದ ಪರಿಣಾಮ, ಪತ್ನಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ನಂತರ ತನ್ನ ಬೈಕ್‌ನಲ್ಲಿ ಮೃತದೇಹವನ್ನು ನಂದಿಪುರದ ಸಂಬಂಧಿಗಳ ಮನೆ ಮುಂದೆ ಇಟ್ಟು ಬಂದಿದ್ದಾನೆ. ಆರೋಪಿ ರವಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


