ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿಯ ಮಾಯಗೊಂಡನಹಳ್ಳಿ ಗ್ರಾಮದಲ್ಲಿ ಶಾಸಕರಾದ ಎಂ.. ವೀರಭದ್ರಯ್ಯ ಮತ್ತು ತುಮಲ್ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಹಾಲಿನ ಡೈರಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ನಂತರ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಈ ಹಿಂದೆ ಹಾಲಿನ ಡೈರಿ ಪ್ರಾರಂಭಮಾಡಿದ ಉದ್ದೇಶವೇ ಬೇರೆ ಆಗಿತ್ತು. ರೈತರ ಮನೆಗಳಲ್ಲಿ ನಾಟಿ ಸೀಮೆ ಹಸುಗಳಿಂದ ಕರಿತಕ್ಕಂತಹ ಹಾಲನ್ನು ಮೊದಲು ಮನೆ ಬಳಕೆಗೆ ಉಪಯೋಗಿಸಿ ನಂತರ ಉಳಿಕೆ ಹಾಲನ್ನು ಡೈರಿಗೆ ಹಾಕಲಾಗುತ್ತಿತ್ತು. ಆದರೆ ಈಗ ಹಂಗಲ್ಲ ಮನೆಗಳಲ್ಲಿ ಸರಿಯಾಗಿ ಹಾಲು ಉಪಯೋಗಿಸದೆ ಸಂಪೂರ್ಣ ಹಾಲನ್ನು ಡೈರಿಗೆ ಹಾಕಲಾಗುತ್ತಿದೆ ಇದರಿಂದ ಮನೆ ಮಕ್ಕಳ ಪೌಷ್ಠಿಕತೆಗೆ ಹಾನಿಯಾಗುತ್ತಿದೆ. ಆದ್ದರಿಂದ ಮನೆ ಮಕ್ಕಳ ಪೌಷ್ಟಿಕತೆಯ ಬಗ್ಗೆ ಕಾಳಜಿವಹಿಸಿ ಎಂದು ಅವರು ಸಲಹೆ ನೀಡಿದರು.
ರೈತರಿಗೆ ಹೈನುಗಾರಿಕೆ ಅನ್ನೋದು ಒಂದು ರೀತಿಯಲ್ಲಿ ಶ್ರೀರಕ್ಷೆ ಇದ್ದಹಾಗೆ. ರೈತರಿಗೆ ವಾರಕ್ಕೊಮ್ಮೆ ಬಟವಾಡಿ ರೂಪದಲ್ಲಿ ನೇರವಾಗಿ ಹಣ ಸಿಗುತ್ತದೆ ಇದರಿಂದ ಜೀವನ ನಿರ್ವಹಣೆಗೆ ಅಲ್ಪ ಮಟ್ಟದಲ್ಲಿ ಸಹಾಯವಾಗುತ್ತದ ಎಂದು ತಿಳಿಸಿದರು.
ಶಾಸಕರಾದ ಎಂ.ವಿ.ವೀರಭದ್ರಯ್ಯ ನವರು ಮಾತನಾಡಿ, ಈ ಗ್ರಾಮದ ಬೆಳವಣಿಗೆಗೆ ಈ ಹಾಲಿನ ಡೈರಿಯ ಕಟ್ಟಡ ನಿರ್ಮಾಣವೂ ಬಹುಮುಖ್ಯವಾಗಿದೆ. ಈ ದಿನ ಕೊಂಡವಾಡಿ ಚಂದ್ರಶೇಖರ್ ರವರ ಜೊತೆಯಲ್ಲಿ ಡೈರಿಯ ಕಟ್ಟಡ ನಿರ್ಮಾಣದ ಭೂಮಿಪೂಜೆಯನ್ನು ಮಾಡಿದ್ದು ನನಗೆ ಬಹಳ ಸಂತೋಷದ ವಿಚಾರ. ಏಕೆಂದರೆ, ರೈತರಿಗೆ ಎಷ್ಟೇ ಕಷ್ಟ ಬಂದರೂ ಈ ಹೈನುಗಾರಿಕೆ ರೈತರ ಕೈ ಹಿಡಿಯುತ್ತದೆ. ಕೊಂಡವಾಡಿ ಚಂದ್ರಶೇಖರ್ ತುಮುಲ್ ಅಧ್ಯಕ್ಷರಾದಾಗ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದು ರೈತರ ಕೈ ಹಿಡಿಯುವ ಕೆಲಸ ಮಾಡಿದ್ದಾರೆ. ಇದರನ್ವಯ ಈ ದಿನ ರೈತರ, ಹಾಲು ಉತ್ಪಾದಕರ ಮಕ್ಕಳಿಗೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿ ಹಾಸ್ಟೆಲ್ ಗಳು ನಿರ್ಮಾಣವಾಗಿವೆ, ಹಾಲು ಉತ್ಪಾದಕರಿಗೆ ಜೀವವಿಮೆ ಇನ್ನು ಹಲವಾರು ಯೋಜನೆಗಳು ಹಾಲು ಉತ್ಪಾದಕರಿಗೆ ಸಹಾಯವಾಗಲಿ ಎಂದು ಆಶಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


