ಮುಂಬೈ: ಮುಂಬೈನ ಅಂಧೇರಿಯಲ್ಲಿ 30 ವರ್ಷದ ಮಾಡೆಲ್ ಒಬ್ಬರು ಹೋಟೆಲ್ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ 8 ಗಂಟೆಗೆ ಹೊಟೇಲ್ ಗೆ ಚೆಕ್ ಇನ್ ಮಾಡಿದ್ದಾಳೆ. ಊಟಕ್ಕೂ ಆರ್ಡರ್ ಮಾಡಿದಳು. ಆದರೆ ಗುರುವಾರ ಬೆಳಗ್ಗೆ ಆಕೆ ಬಾಗಿಲು ತೆಗೆದಿರಲಿಲ್ಲ.
ಎಷ್ಟು ಕರೆ ಮಾಡಿದರೂ ಆಕೆ ಬಾಗಿಲು ತೆರೆಯಲಿಲ್ಲ. ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಾಸ್ಟರ್ ಕೀ ಮೂಲಕ ಆ ಕೊಠಡಿಯ ಬಾಗಿಲನ್ನು ತೆರೆದರು. ಮಾಡೆಲ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಪೊಲೀಸರಿಗೆ ಕಂಡುಬಂದಿದೆ.
ಆ ಕೊಠಡಿಯಿಂದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣರಲ್ಲ, ನನಗೆ ಸಂತೋಷವಿಲ್ಲ, ನನಗೆ ಶಾಂತಿ ಬೇಕು ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy