ಹಿರಿಯೂರು: ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ತಹಶೀಲ್ದಾರ್ ಪ್ರಶಾಂತ ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ದಸರಾ ಹಬ್ಬವನ್ನು ಸಡಗರ- ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ ಕೆ. ಪಾಟೀಲ , ಈ ಮೊದಲು ಬರೀ ಪೂಜಾ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ ದಸರಾ ಹಬ್ಬ, ಇದೇ ಮೊದಲ ಬಾರಿಗೆ ತಾಲೂಕು ಕಚೇರಿಯನ್ನು ತಳಿರುತೋರಣಗಳೊಂದಿಗೆ ಸಿಂಗರಿಸಿ, ವಿಶೇಷ ಪೂಜೆಯೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ಪ್ರಸಿದ್ದ ದಕ್ಷಿಣಕಾಶಿ ಎಂದೇ ಹೆಸರಾದ ಶ್ರೀತೇರುಮಲ್ಲೇಶ್ವರಸ್ವಾಮಿಯ ಅಂಬಿನೋತ್ಸವ ಸಹ ನಡೆಯಲಿದ್ದು, ನಗರದ ತಾಲ್ಲೂಕು ಕಚೇರಿ ಸೇರಿದಂತೆ ತಾಲ್ಲೂಕು ಕಚೇರಿಯಿಂದ ಮುಖ್ಯಬೀದಿಯುದ್ಧಕ್ಕೂ ಹಾಗೂ ಶ್ರೀತೇರುಮಲ್ಲೇಶ್ವರ ದೇವಸ್ಥಾನದವರೆಗೆ ಸತತ 3 ದಿನಗಳ ಕಾಲ ವಿಶೇಷ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬುದಾಗಿ ಇದೇ ವೇಳೆ ತಿಳಿಸಿದರು.
ದಸರಾ ಹಿನ್ನೆಲೆಯಲ್ಲಿ ಕಚೇರಿಯ ಸಿಬ್ಬಂದಿ ಹೊಸ ಉಡುಗೆ, ತೊಡುಗೆ ತೊಟ್ಟು ಅದರಲ್ಲೂ ಮಹಿಳಾ ಸಿಬ್ಬಂದಿ ಹಸಿರುಸೀರೆಯನ್ನು ಉಟ್ಟು ಸಡಗರಸಂಭ್ರಮಗಳಿಂದ ಕಚೇರಿಯಲ್ಲಿ ಓಡಾಡುತ್ತಿದ್ದದ್ದು ಅತ್ಯಂತ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಉಪತಹಶೀಲ್ದಾರರಾದ ಮಂಜಪ್ಪ , ಮಹಂತೇಶ್ , ಎಫ್ ಡಿ ಎ ಅಧಿಕಾರಿಯಾದ ಪೂಜಾ ಮಹೇಶ್ ಗುಯಿಲಾಳು, ರಾಜಸ್ವ ನಿರೀಕ್ಷಕರಾದ ಶಿವಮೂರ್ತಿ, ಗೋಪಿನಾಯ್ಕ , ವರದರಾಜು, ಸ್ವಾಮಿ , ಗ್ರಾಮಲೆಕ್ಕಾಧಿಕಾರಿಯಾದ ಮಾಯವರ್ಮ , ಮಂಜು, ಗಿರೀಶ್ , ರಾಜು, ಸೇರಿದಂತೆ ಭೂಮಾಪನ ಇಲಾಖೆಯ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


