ಚಿತ್ರದುರ್ಗ: ಬೆಳೆ ಹಾನಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಕ್ಷಣವೇ ಸ್ಪಂದಿಸಿ, ಪರಿಹಾರ ಕೊಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಇಕ್ಕನೂರು ಗ್ರಾಮದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಇಕ್ಕನೂರು ಗ್ರಾಮದ ರೈತರಾದ ಓದೋ ಸಿದ್ದಪ್ಪರವರ ಜಮೀನು ಬಳಿ ಸೇರಿದ ರೈತರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಈ ವೇಳೆ ಇಕ್ಕನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ, ಶಾಸಕರಾದ ಕೆ. ಪೂರ್ಣಿಮಾ ಶ್ರೀನಿವಾಸ್ ರವರು ಕೃಷಿ, ಕಂದಾಯ ತೋಟಗಾರಿಕೆ ಇಲಾಖಾ ಅಧಿಕಾರಿಗಳ ಎರಡು ಮೂರು ಸಭೆ ನಡೆಸಿ ತಾಲ್ಲೂಕಿನಲ್ಲಿ ಸುಮಾರು ಇಪ್ಪತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಹಾನಿಯಾಗಿದ್ದ ಬೆಳೆಗೆ 28 ಕೋಟಿ ಪರಿಹಾರ ಮುಂಜೂರು ಮಾಡಿಸಿರುತ್ತಾರೆ. ಇದರಿಂದಾಗಿ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಇಕ್ಕನೂರು ಗ್ರಾಮದ ರೈತ ಮುಖಂಡರಾದ ತಮ್ಮಣ್ಣ, ಮೋಹನ್ ಕುಮಾರ್ , ನಿಂಗಣ್ಣ, ಧನಂಜಯ್ , ರಂಗನಾಥ್ , ಶಿವನಗರ ಶಂಕ್ರಣ್ಣ , ರಂಗನಾಥಪುರ ಮೋಹನ್ ಗೌಡ್ರು, ದೇವರಾಜ ನಾಗಣ್ಣ, ರಾಮಚಂದ್ರ ಕಸವನಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


