ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರ ಪತಿ ಜಾನ್ ಷಾ ಸೋಮವಾರ, ಅಂದರೆ ಇಂದು ನಿಧನರಾಗಿರುವುದಾಗಿ ಸಂಸ್ಥೆಯ ವಕ್ತಾರರು ದೃಢಪಡಿಸಿದ್ದಾರೆ.
ಈ ವಿಶ್ವಮಾನ್ಯ ಬಯೋಟೆಕ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಅನಾರೋಗ್ಯ ಕಾರಣಗಳಿಂದಾಗಿ ಕಳೆದ ವರ್ಷ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಮೃತರ ಅಂತಿಮಸಂಸ್ಕಾರವನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ಚಿತಾಗಾರದಲ್ಲಿ ಇಂದು ನಡೆಸಲಾಗುವುದು. ಇವರ ನಿಧನದ ನಿಖರವಾದ ಕಾರಣವನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಜಾನ್ ಷಾ ಅವರು 1949ರಲ್ಲಿ ಜನಿಸಿದರು. 1999ರಿಂದ ಬಯೋಕಾನ್ ಸಂಸ್ಥೆಯ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದು, ವಿದೇಶ ಪ್ರಮೋಟರ್ ಆಗಿ ಸೇವೆ ಸಲ್ಲಿಸಿದರು. ಜೊತೆಗೆ ಬಯೋಕಾನ್ ಸಮೂಹ ಸಂಸ್ಥೆಗಳ ವಿವಿಧ ಸಲಹಾ ಮಂಡಳಿಗಳಲ್ಲಿಯೂ ಇದ್ದಾರು.
ಇವರು ೧೯೯೧ ರಿಂದ ೧೯೯೮ರವರೆಗೆ ಮಧುರಾ ಕೋಟ್ಸ್ ನ ಅಧ್ಯಕ್ಷರಾಗಿದ್ದರು. ಅದಕ್ಕೂ ಮುಂಚೆ ಅವರು ಕೋಟ್ಸ್ ವಿಯೆಲ್ಲಾದಲ್ಲಿ ಮೂರು ದಶಕಗಳ ಕಾಲ ಲ್ಯಾಟಿನ್ ಅಮೇರಿಕ, ಆಫ್ರಿಕಾ ಮತ್ತು ಯೂರೋಪ್ ಗಳಲ್ಲಿ ಹಣಕಾಸು ಹಾಗೂ ಪ್ರಧಾನ ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿದ್ದರು.
ಷಾ ಅವರು 1970ರಲ್ಲಿ ಗ್ಲಾಸ್ ಗೋ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಹಾಗೂ ರಾಜಕೀಯ ಆರ್ಥಿಕತೆ ವಿಷಯದಲ್ಲಿ ಎಂ.ಎ. (ಹಾರ್ಸ್ಧ) ಪದವಿಯನ್ನು ಪೂರ್ಣಗೊಳಿಸಿದ್ದರು. ಜೊತೆಗೆ ಅದೇ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನೂ ಸಹ ಸಂಪಾದಿಸಿದ್ದರು. ಷಾ ಅವರು ಗಾಲ್ಫ್, ಫುಟ್‌ಬಾಲ್, ರಗ್ಬಿ ಹಾಗೂ ಕ್ರಿಕೆಟ್ ಆಟಗಳ ಪ್ರೇಮಿಯೂ ಆಗಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy