ಬಾಗಲಕೋಟೆ: ಜವಾಬ್ದಾರಿ ಸ್ಥಾನದಲ್ಲಿರುವವರು ಯಾರದೋ ಮಾತು ಕೇಳಿ ಬಾಯಿ ಚಪಲಕ್ಕೆ ಮಾತನಾಡಬಾರದು ಎಂದು ಮೀಸಲಾತಿ ಕೈತಪ್ಪಲು ಸಚಿವ ಮುರುಗೇಶ್ ನಿರಾಣಿ ಕಾರಣ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಮ್ಮ ಸಮಾಜದ ಒಬ್ಬ ಸಚಿವರಿಂದ ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ತಪ್ಪಿತು ಎಂಬ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಾನು ಪಂಚಮಸಾಲಿ ಮೀಸಲಾತಿ ತಪ್ಪಿಸಿದ್ದೇನೆ. ಮೀಸಲಾತಿ ತಪ್ಪಿಸಲೆಂದು ಇಂಥವರ ಜೊತೆಗೆ ಮಾತನಾಡಿದ್ದೇನೆ. ಇಂಥ ಜಾಗದಲ್ಲಿ ಭಾಷಣ ಮಾಡಿದ್ದೇನೆ ಎಂದು ಸ್ವಾಮೀಜಿ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ.
ಒಂದು ವೇಳೆ ಸಾಕ್ಷಿ ನೀಡಲು, ಸಾಬೀತುಪಡಿಸಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ರಾಜಕೀಯಕ್ಕೆ ಬರಬೇಕು ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಸವಾಲು ಹಾಕಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


