ಪಾವಗಡ : ಪಾವಗಡ ಪಟ್ಟಣದ ಹಿಂದೂಪುರ ರಸ್ತೆಯ ಬದಿಯ ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರ ಜೊತೆಯಲ್ಲಿ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ಕೇಕ್ ಕತ್ತರಿಸಿ, ಗುಡಿಸಲು ವಾಸಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಿ ವಿಭಿನ್ನವಾಗಿ ಹೊಸ ವರ್ಷವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿ ಮಾರ್ಗದರ್ಶಕರಾದ ಸಂಧ್ಯಾ ಮಾನಂ ಶಶಿಕಿರಣ್, ಇಂದು ನಿರ್ಗತಿಕರು ಚಳಿ, ಮಳೆ, ಬಿಸಿಲನ್ನದೇ ತಮ್ಮ ಜೀವನೋಪಯವನ್ನು ನಡೆಸುತ್ತಿದ್ದೂ, ಇಂತವರ ಮುಖದಲ್ಲಿ ಮಂದಹಾಸವನ್ನು ನೋಡುವ ಸಲುವಾಗಿ ಹೊಸ ವರ್ಷ ದಲ್ಲಿ ಇವರ ಜೊತೆಯಲ್ಲಿ ಕೇಕ್ ಕತ್ತರಿಸಿ ಶುಭಾಶಯಗಳನ್ನು ತಿಳಿಸಿ, ಇವರ ಜೀವನ ಸುಖಕರವಾಗಿರಲೆಂದು ಆಶಿಸಿ, ಇಲ್ಲಿ ನೆಲೆಸಿರುವ ನಿರ್ಗತಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲಾ ಬ್ಯಾಗ್ ವಿತರಿಸಿ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡುವಂತೆ ಪೋಷಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ರೂವಾರಿಗಳು ಅಧ್ಯಕ್ಷರು ಆದಂತಹ ಮಾನಂ ಶಶಿಕಿರಣ್,ಚಿರಂಜೀವಿ ಫ್ಯಾನ್ಸ್ ಕ್ಲಬ್ ನ ವೀರ, ಹೆಲ್ಪ್ ಸೊಸೈಟಿ ತಂಡದ ಸಾಯಿ ಕುಮಾರ್, ಮೆಹರ್ ರಘು, ಭರತ್, ಅರವಿಂದ್ ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ್, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz