nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗುಬ್ಬಿ ಬಳಿ ಸರ್ಕಾರಿ ಬಸ್ ಪಲ್ಟಿ: ಅಪಾಯದಿಂದ ಪಾರಾದ ಪ್ರಯಾಣಿಕರು

    April 22, 2026

    ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ

    April 21, 2026

    ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ

    April 21, 2026
    Facebook Twitter Instagram
    ಟ್ರೆಂಡಿಂಗ್
    • ಗುಬ್ಬಿ ಬಳಿ ಸರ್ಕಾರಿ ಬಸ್ ಪಲ್ಟಿ: ಅಪಾಯದಿಂದ ಪಾರಾದ ಪ್ರಯಾಣಿಕರು
    • ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ
    • ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ
    • ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!
    • ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ
    • ಬಸವಣ್ಣನವರ ವಿಚಾರಧಾರೆ ಸಂವಿಧಾನದಲ್ಲಿ ಅಡಕ: ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ
    • ಮೂಲಭೂತ ಮೌಲ್ಯಗಳಲ್ಲಿ ಬಸವಣ್ಣನವರ ಸಮಾನತೆ, ನ್ಯಾಯ, ಮಾನವೀಯತೆಯ ಸಂದೇಶವಿದೆ: ಡಾ.ಜಿ.ಪರಮೇಶ್ವರ
    • ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ: ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅತ್ಯಂತ ದುಬಾರಿ ಬೆಲೆಗೆ ನಾಯಿಯನ್ನು ಖರೀದಿಸಿದ ಮಾಲೀಕರು
    ರಾಜ್ಯ ಸುದ್ದಿ January 5, 2023

    ಅತ್ಯಂತ ದುಬಾರಿ ಬೆಲೆಗೆ ನಾಯಿಯನ್ನು ಖರೀದಿಸಿದ ಮಾಲೀಕರು

    By adminJanuary 5, 2023No Comments2 Mins Read
    dog

    ಇಡೀ ವಿಶ್ವದಲ್ಲೇ ಬೆಂಗಳೂರು ಮಹಾನಗರ ಅತ್ಯಂತ ದುಬಾರಿ ನಾಯಿಗಳಿರುವ ನಗರವಂತೆ! ಇದು ನಿಮಗೆ ತಿಳಿದಿತ್ತೇ?!
    ಕಡಬೊಮ್ ಕೆನ್ನೆಲ್ಸ್ ಎಂಬ ಹೆಸರಿನ ಸಂಸ್ಥೆಯೊಂದರ ಮಾಲೀಕರು ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರು ಅತ್ಯಂತ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ನಿಪುಣರು.

    ಇವರು ಇತ್ತೀಚೆಗೆ ಖರೀದಿಸಿರುವ ನಾಯಿಯ ಬೆಲೆ ಬರೋಬ್ಬರಿ ರೂ.೨೦ ಕೋಟಿಗಳಂತೆ. ಈ ನಾಯಿ ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ್ದು, ಬಹುಪಾಲು ರಷ್ಯಾ, ಟರ್ಕಿ, ಅಮೇನಿಯಾ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಲಭಿಸುತ್ತದೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಬಹಳ ಅಪರೂಪ.


    Provided by
    Provided by

    ಈ ಜಾತಿಯ ನಾಯಿಗಳು, ಬಹಳ ಧೈರ್ಯ, ವಿಶ್ವಾಸ, ಭಯರಹಿತ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳಂತೆ. ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ ಮತ್ತು ೧೦-೧೨ ವರ್ಷ ಜೀವಿಸುತ್ತವಂತೆ.

    ಅಮೇರಿಕನ್ ಕೆನ್ನೆಲ್ ಕ್ಲಬ್‌ ನ ಪ್ರಕಾರ, ಈ ಕಾಕೇಸಿಯನ್ ಷೆಪರ್ಡ್ಸ್ ಜಾತಿಯ ನಾಯಿಗಳನ್ನು ಭೂಮಿ ಒತ್ತುವರಿಯನ್ನು ತಡೆಗಟ್ಟಲು, ಹಸು ಹಾಗೂ ಇತರೆ ಸಾಕುಪ್ರಾಣಿಗಳಂತಹ ಜಾನುವಾರುಗಳನ್ನು ನರಿ, ಚಿರತೆಗಳಂತಹ ಇತರೆ ಪ್ರಾಣಿಗಳಿಂದ ಕಾಪಾಡಿಕೊಳ್ಳಲು ಬಳಸುತ್ತಾರಂತೆ.

    ಈ ಹಿಂದೆ ಸತೀಶ್ ಅವರು ‘ಕೋರಿಯನ್ ದೋಸ ಮಾಸ್ಟಿಫ್ಸ್’ ಎಂಬ ಮತ್ತೊಂದು ಅಪರೂಪದ ತಳಿಯ ನಾಯಿಯನ್ನು ರೂ.೧ ಕೋಟಿ ಕೊಟ್ಟು ಖರೀದಿಸಿದ್ದರಂತೆ. ಅದೇ ರೀತಿ ಅಲಾಶ್ಕನ್ ಮಾಲಾಮುಟೆ ರೂ.೮ ಕೋಟಿ, ಟಿಬೇಟನ್ ಮಾಸ್ಟಿಫ್ ರೂ.೧೦ ಕೋಟಿ ಕೊಟ್ಟು ಖರೀದಿಸಿದ್ದರಂತೆ. ಈ ರೂ.೨೦ ಕೋಟಿ ಬೆಲೆಯ ‘ಕಡಬೊಮ್ ಹೈದರ್’ ಈಗ ಸುಮಾರು ೧.೫ ವರ್ಷ ವಯಸ್ಸಿನದಾಗಿದ್ದು, ಇದನ್ನು ಹೈದ್ರಾಬಾದ್‌ನಲ್ಲಿರುವ ನಾಯಿಗಳ ಮಾರಾಟ ಮಾಡುವವರಿಂದ ಖರೀದಿಸಲಾಯಿತಂತೆ.

    ಇತ್ತೀಚೆಗೆ ಕಡಬೊಮ್ ಹೈದರ್ ತಿರುವನಂತಪುರದಲ್ಲಿ ನಡೆದಂತಹ ಕೆನ್ನೆಲ್ ಕ್ಲಬ್‌ ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾಗವಹಿಸಿ, ಅತ್ಯುತ್ತಮ ತಳಿ ವರ್ಗದಡಿ ೩೨ ಪದಕಗಳನ್ನು ಗೆದ್ದಿದೆಯಂತೆ!

    “ಈ ನನಗೆ ಹೈದರ್ ಇಷ್ಟೊಂದು ಪದಕಗಳು ಹಾಗೂ ಟ್ರೋಫಿಗಳನ್ನು ಗೆದ್ದಿರುವುದನ್ನು ನೋಡಿ ಆಶ್ಚರ್ಯವಾಯಿತು. ಕೇವಲ ಏಳು ದಿನಗಳಲ್ಲಿ ಈ ನಾಯಿ ೩೨ ಪದಕಗಳನ್ನು ಗೆದ್ದಿದೆ. ಈ ನಾಯಿ ನೋಡಲು ಬೃಹತ್ ಗಾತ್ರವನ್ನು ಹೊಂದಿದೆ, ಆದರೆ ಬಹಳ ಸ್ನೇಹಪರ ಜೀವಿಯಾಗಿದೆ. ಪ್ರಸ್ತುತ ಇದು ನನ್ನ ಹವಾನಿಯಂತ್ರಿತ ಮನೆಯಲ್ಲಿ ನನ್ನ ಜೊತೆಯಲ್ಲೇ ಇದೆ,” ಎಂದು ಸತೀಶ್ ತಿಳಿಸಿದರು.

    “ಈ ನಾಯಿಯನ್ನು ನವೆಂಬರ್ ತಿಂಗಳಲ್ಲಿ ಬೆಂಗಳೂರಿಗರಿಗೆ ಪರಿಚಯಿಸಲು ಬಯಸಿದ್ದೆ. ಆದರೆ ಆ ಸಮಯದಲ್ಲಿ ಈ ನಾಯಿಯ ಮೈಮೇಲಿನ ಕೂದಲು ಉದುರುತಿತ್ತು. ಹಾಗಾಗಿ, ನಾನು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದೆ. ಈಗ ಫೆಬ್ರವರಿ ತಿಂಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ, ಅಲ್ಲಿ ಈ ನಾಯಿಯನ್ನು ಪ್ರದರ್ಶಿಸಬೇಕೆಂದು ಆಲೋಚಿಸಿದ್ದೇನೆ,” ಎಂದು ಸತೀಶ್ ವಿವರಿಸಿದರು.

    ಪ್ರಸ್ತುತ, ಸತೀಶ್ ಅವರು ಇದೇ ಜಾತಿಯ ಎರಡು ಮರಿಗಳನ್ನು ರೂ.೫ ಕೋಟಿ ಕೊಟ್ಟು ಖರೀದಿಸಿದ್ದಾರಂತೆ. “ನಾನು ಈ ನಾಯಿಗಳನ್ನು ಮಾರುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ. ಇವುಗಳನ್ನುಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ ಹಾಗೂ ಇದರ ಉಟೋಪಚಾರಗಳಿಗೆ ಆರೈಕೆ ಬೇಕಾಗುತ್ತದೆ. ನನ್ನ ಬಳಿ ಅದಕ್ಕೆಂದೇ ಜನರಿದ್ದಾರೆ. ಜೊತೆಗೆ ಆಗಾಗ ಇದಕ್ಕೆ ಬ್ರಷಿಂಗ್ ಮಾಡಬೇಕಾಗುತ್ತದೆ ಹಾಗೂ ಆಗಾಗ ಅದರ ಕಿವಿಗಳನ್ನು ಸ್ವಚ್ಛಗೊಳಿಸುತ್ತಿರಬೇಕು ಮತ್ತು ಉಗುರಗಳನ್ನು ಕತ್ತರಿಸುತ್ತಿರಬೇಕಾಗುತ್ತದೆ,” ಎಂದರು.

    ಸುದ್ದಿ ಮೂಲ: ಬೆಂಗಳೂರ್ ಮಿರರ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

    April 21, 2026

    ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    April 20, 2026

    50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ಖತರ್ನಾಕ್ ಉದ್ಯಮಿ ಕೃಪಲಾನಿ ಅರೆಸ್ಟ್!

    April 20, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss

    ಗುಬ್ಬಿ ಬಳಿ ಸರ್ಕಾರಿ ಬಸ್ ಪಲ್ಟಿ: ಅಪಾಯದಿಂದ ಪಾರಾದ ಪ್ರಯಾಣಿಕರು

    April 22, 2026

    ಗುಬ್ಬಿ : ಪಟ್ಟಣದ ಸಮೀಪದ ಎಂ.ಹೆಚ್.ಪಟ್ಟಣ ಗೇಟ್ ಬಳಿ ತಾಂತ್ರಿಕ ದೋಷದಿಂದ ಆಕ್ಸಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್…

    ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಅರೆಸ್ಟ್; 18 ಲಕ್ಷ ರೂ. ಮೌಲ್ಯದ ಸೊಪ್ಪು ವಶ

    April 21, 2026

    ತರಕಾರಿ ತರಲು ಹೋಗಿದ್ದ ಯುವಕ ಬಿಸಿಲಿನ ಝಳಕ್ಕೆ ಸಾವು: ಬೀದರ್‌ ನಲ್ಲಿ ದಾರುಣ ಘಟನೆ

    April 21, 2026

    ಹೊಸ ರಾಜಕೀಯ ಹಾದಿ ತುಳಿಯಲಿದ್ದಾರೆಯೇ ಯತ್ನಾಳ್? ಶುಭ ಮುಹೂರ್ತದಲ್ಲಿ ಹೊಸ ಪಯಣದ ಸುಳಿವು ನೀಡಿದ ಶಾಸಕ!

    April 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.