ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಯ ಸಿದ್ದವಾಗಿದ್ದು 229 ಮತಗಟ್ಟೆಗಳ ಅಧಿಕಾರಿಗಳು ಮತಗಟ್ಟೆಗಳ ಮತದಾರರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ ಎಂದು ತಹಶೀಲ್ದಾರ್ ರೇಣುಕುಮಾರ್ ತಿಳಿಸಿದ್ದಾರೆ.
2022ರ ನವೆಂಬರ್ 9 ರಂದು ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ. ಹಾಗೆಯೇ ಮರಣ ಹೊಂದಿರುವ ಮತ್ತು ಸ್ಥಳಾಂತರ ಹೊಂದಿರುವ ವ್ಯಕ್ತಿಗಳನ್ನೂ ಪಟ್ಟಿಯಿಂದ ಕೈಬಿಟ್ಟಿದ್ದು ಹಾಗೂ ಹೊಸದಾಗಿ ಮತದಾನದ ಹಕ್ಕನ್ನು 18 ವರ್ಷ ತುಂಬಿರುವ ಹೊಸ ಮತದಾರರ ಪಟ್ಟಿಯ ಸಿದ್ದವಾಗಿದ್ದು, ಅವರುಗಳು ಪಟ್ಟಿಯನ್ನು ಪರಿಶೀಲಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.
ಪಟ್ಟಿಯಲ್ಲಿ 88,801 ಗಂಡು ಮತ್ತು 88,847ಹೆಣ್ಣು ಇತರೆ 3 ಒಟ್ಟು 1,77,651ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈಗ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿದ್ದು ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗಂಡು 89,769 ಹಾಗೂ ಹೆಣ್ಣು 90,185 ಇತರೆ 4 ಮತದಾರರು ಒಟ್ಟು 1,79,958 ಮತದಾರರ ಪಟ್ಟಿ ಸಿದ್ದವಾಗಿ ಪ್ರಕಟಿಸಲಾಗಿದೆ. ಜೊತೆಗೆ ಮತದಾರರ ಪಟ್ಟಿಯ ಪೈಕಿ ಶೇಕಡಾ 91.79ರಷ್ಟು ಆಧಾರ್ ಜೋಡಣೆ ನಡೆದಿರುತ್ತದೆ. ಉಳಿದಂತೆ ಆಧಾರ್ ಜೋಡಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1