ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೋರ್ವ ಮಹಿಳೆ ಮೇಲೆ ಮೂತ್ರ ಮಾಡಿದ ಘಟನೆ ದೊಡ್ಡ ಸುದ್ದಿಯಾಗಿತ್ತು. ಇದೀಗ ಆರೋಪಿ ಶಂಕರ್ ಮಿಶ್ರಾ, ನಾನು ಮೂತ್ರ ಮಾಡಿಲ್ಲ, ಮಹಿಳೆ ತಾನಾಗಿಯೇ ಮೂತ್ರ ಮಾಡಿಕೊಂಡಿದ್ದಾಳೆ ಎಂದು ವಾದಿಸಿದ್ದಾನೆ.
ದೆಹಲಿ ಕೋರ್ಟ್ ನಲ್ಲಿ ಶಂಕರ್ ಮಿಶ್ರಾ ತನ್ನ ವಕೀಲರ ಮೂಲಕ ಈ ವಾದ ಮಂಡಿಸಿದ್ದಾನೆ. ನಾನು ದೂರುದಾರರ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ ಎಂದು ವಾದಿಸಿದ್ದಾನೆ.
ದೂರುದಾರ ಮಹಿಳೆಯ ಆಸನವನ್ನು ನಿರ್ಬಂಧಿಸಲಾಗಿತ್ತು. ಶಂಕರ್ ಮಿಶ್ರಾಗೆ ಮಹಿಳೆ ಇದ್ದ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ದೂರುದಾರಳಿಗೆ ಮೂತ್ರ ವಿಸರ್ಜಿಸುವ ಸಮಸ್ಯೆ ಇದೆ. ಅವಳು ಕಥಕ್ ಡಾನ್ಸರ್ ಆಗಿದ್ದಾಳೆ. ಶೇ.80ರಷ್ಟು ಕಥಕ್ ಡಾನ್ಸ್ರರ್ ಗೆ ಈ ಸಮಸ್ಯೆ ಇದೆ ಎಂದು ಮಿಶ್ರಾನ ವಕೀಲರು ವಾದಿಸಿದ್ದಾರೆ.
ವಿಮಾನದ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಸಾಧ್ಯವಿಲ್ಲ ಅನ್ನೋ ಮಿಶ್ರಾನ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಧೀಶರು, ನಾನು ಕೂಡ ವಿಮಾನದಲ್ಲಿ ಪ್ರಯಾಣಿಸಿದ್ದೇನೆ ಯಾವುದೇ ಸಾಲಿನಲ್ಲಿ ಬಂದರೂ ಆಸನದತ್ತ ಹೋಗಬಹುದು ಎಂದಿದ್ದು, ಈ ಬಗ್ಗೆ ಆಸನದ ನೀಲಿ ನಕ್ಷೆಯನ್ನು ಕೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


