ತುರುವೇಕೆರೆ.ತಾಲೂಕಿನ ಕಸಬಾ ಹೋಬಳಿ, ಕೊಡಗಿಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸೂಳೆಕೆರೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕರಾದ ಮಸಾಲ ಜಯರಾಮ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿ ಪೂಜೆಯಲ್ಲಿ ಆದಿಜಾಂಭವ ಸಮಾಜದ ನಿವೃತ್ತ ಮುಖ್ಯೋಪಾಧ್ಯಾಯರಾದ ಆರ್. ಚಂದ್ರಯ್ಯ ಕೂಡ ಆಗಮಿಸಿದ್ದರು, ಪೂಜೆಯ ನಂತರ ಆರ್ ಚಂದ್ರಯ್ಯ ಮನೆಗೆ ಭೇಟಿಕೊಟ್ಟ ಶಾಸಕ ಮಸಾಲ ಜಯರಾಮ್ ಅವರ ಮನೆಯಲ್ಲಿ ತಂಪು ಪಾನೀಯ ಬಿಸ್ಕೆಟ್ ಸೇವಿಸಿದರು.
ತದನಂತರ ಅವರ ಗೃಹದಲ್ಲಿ ಕೆಲವು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರುಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಮಾತನಾಡಿದ ಆರ್.ಚಂದ್ರಯ್ಯ, ಶಾಸಕರು ನಮ್ಮನ್ನು ಗುರುತಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿ ಅಭಿವೃದ್ಧಿಯತ್ತ ಗಮನ ಕೊಡುತ್ತಿದ್ದು, ಇಂದು ಕೂಡ ನಮ್ಮ ಊರಿನಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಹಾಗಾಗಿ ನಾವು ಬಿಜೆಪಿ ಸಿದ್ದಾಂತವನ್ನು ಒಪ್ಪಿ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಹೇಳಿದರು,
ಇದೇ ಸಮಯದಲ್ಲಿ ಆದಿ ಜಾಂಬವ ಸಮಾಜದ ನಾಗರಾಜು, ಬಸವರಾಜು, ಮುನಿಸ್ವಾಮಿ, ಇನ್ನು ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು,
ಇನ್ನು ಗುದ್ದಲಿ ಪೂಜೆ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಆದ ಸವಿತಾ ಮುನಿಸ್ವಾಮಿ, ಸಿದ್ದಲಿಂಗ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ,ಮಂಜುನಾಥ, ನರಸಿಂಹಮೂರ್ತಿ, ಯೋಗೇಶ್, ಮಮತಾ, ಗೀತಾ ,ಪಂಕಜ, ಸಹನಾ, ಇನ್ನು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು,
ಜೊತೆಗೆ ಇಂದು ಒಂದೇ ದಿನ ತಾಲೂಕಿನ ಕಸಬಾ ಹೋಬಳಿಯಲ್ಲಿ ವಿವಿಧ ಗ್ರಾಮಗಳಿಗೆ ಸುಮಾರು ಐದು ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಮಸಾಲ ಜೈರಾಮ್ ಗುದ್ದಲಿ ಪೂಜೆ ನೆರವೇರಿಸಿದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1