ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಯುವತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಇಕ್ರಾ ಜೀವನಿ (19) ಬಂಧಿತ ಪಾಕಿಸ್ತಾನಿ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಎಂಬಾತನನ್ನು ಮದುವೆಯಾಗಿ ನಗರದ ಸರ್ಜಾಪುರ ರಸ್ತೆಯ ಜನ್ನಸಂದ್ರದಲ್ಲಿ ವಾಸವಾಗಿದ್ದಳು.
ಮುಲಾಯಂ ಸಿಂಗ್ ಎಚ್ಎಸ್ಆರ್ ಲೇಔಟ್ನ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಈ ವೇಳೆ ಗೇಮಿಂಗ್ ಆ್ಯಪ್ LUDOನಲ್ಲಿ ಪಾಕಿಸ್ತಾನದ ಇಕ್ರಾ ಜೀವಾನಿ ಪರಿಚಯವಾಗಿದೆ. ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಇಕ್ರಾ ಜೀವಾನಿಯನ್ನು ಭಾರತಕ್ಕೆ ಕರೆತಂದಿದ್ದ ಮುಲಾಯಂ ಸಿಂಗ್, ಆಕೆಯೊಂದಿಗೆ ಒಟ್ಟಿಗೆ ವಾಸವಿದ್ದ. ಇದೀಗ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಆರೋಪಿ ಇಕ್ರಾ, ರವ ಯಾದವ್ ಎನ್ನುವ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಳು. ಮುಲಾಯಂ ಸಿಂಗ್ ಈಕೆಯನ್ನು ನೇಪಾಳದ ಮೂಲಕ ಬಿಹಾರಕ್ಕೆ ಕರೆಸಿಕೊಂಡು, ಅಲ್ಲಿಂದ ರಾಜ್ಯಕ್ಕೆ ಕರೆತಂದಿದ್ದ. ಇವರಿಂದ ಸರಿಯಾಗಿ ದಾಖಲೆ ಪಡೆಯದೇ ಗೋವಿಂದ ರೆಡ್ಡಿ ಎಂಬಾತ ಮನೆ ಬಾಡಿಗೆ ನೀಡಿದ್ದ ಎನ್ನಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


