- ಅರವಿಂದ ಮಲ್ಲಿಗೆ
ಬೀದರ್: ನಮ್ಮತುಮಕೂರು ಮಾಧ್ಯಮವು ತುಮಕೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಪ್ರಭಾವ ಬೀರುತ್ತಿದ್ದು, ಬೀದರ್ ಜಿಲ್ಲೆಯ ಕಮಲ್ ನಗರ್ ಹಾಗೂ ಔರಾದ್ ಬಿ ತಾಲೂಕಿನ ಆ್ಯಂಬುಲೆನ್ಸ್ ಸಮಸ್ಯೆಯ ಕುರಿತಂತೆ ಮಾಧ್ಯಮ ಬೆಳಕು ಚೆಲ್ಲಿದ ಬೆನ್ನಲ್ಲೇ ಇದೀಗ ಜಿಲ್ಲಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.
ಕಮಲ್ ನಗರ್ ಹಾಗೂ ಔರಾದ್ ಬಿ ತಾಲೂಕಿನಲ್ಲಿ ತುರ್ತು ಸೇವೆಗಾಗಿ 3 ಆ್ಯಂಬುಲೆನ್ಸ್ ಗಳಿದ್ದವು. ಆದರೆ ಇದು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ತಾಲೂಕಿನ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ನಡುವೆ ಬೀದರ್ ಜಿಲ್ಲಾ ಭೀಮ್ ಆರ್ಮಿ ಇದರ ವಿರುದ್ಧ ಧ್ವನಿಯೆತ್ತಿದ್ದು, ತಾಲೂಕು ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿತ್ತು.
ಇಲ್ಲಿನ ಆ್ಯಂಬುಲೆನ್ಸ್ ಸಮಸ್ಯೆಯ ಬಗ್ಗೆ ನಮ್ಮತುಮಕೂರು ಮಾಧ್ಯಮ ಸಂಪೂರ್ಣವಿವರದೊಂದಿಗೆ ವರದಿ ಮಾಡಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಔರಾದ್ ಬಿ ತಾಲ್ಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಒದಗಿಸಿದ್ದಾರೆ. ಜೊತೆಗೆ ಇನ್ನಷ್ಟು ಆ್ಯಂಬುಲೆನ್ಸ್ ಗಳ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಇನ್ನೂ ಆ್ಯಂಬುಲೆನ್ಸ್ ಇಲ್ಲದೇ ಹಲವು ಸಮಯದಿಂದ ಪರದಾಡುತ್ತಿದ್ದ ಸಾರ್ವಜನಿಕರಿಗೆ ಇದೀಗ ನಮ್ಮತುಮಕೂರು ವರದಿ ಆಶಾಕಿರಣವಾಗಿದ್ದು, ಸಮಸ್ಯೆಯ ಬಗ್ಗೆ ವರದಿ ಪ್ರಕಟಿಸಿ ಅಧಿಕಾರಿಗಳ ಕಣ್ತೆರೆಸಿದ್ದಕ್ಕೆ ನಮ್ಮತುಮಕೂರು ಮಾಧ್ಯಮಕ್ಕೆ ಭೀಮ್ ಆರ್ಮಿ ಸಂಘಟನೆ ಹಾಗೂ ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನಷ್ಟು ಸಾಮಾಜಿಕ ಸೇವೆಯೊಂದಿಗೆ ನಮ್ಮತುಮಕೂರು ನಿತ್ಯನಿರಂತರವಾಗಿ ಸಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


