ತುರುವೇಕೆರೆ: ಪಟ್ಟಣದಿಂದ ದಬ್ಬೇಘಟ್ಟ ಗ್ರಾಮದವರಿಗೆ ಸೂಳೇಕೆರೆ ಮೂಲಕ ಹಾದು ಹೋಗುವ ಮುಖ್ಯ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಇದೀಗ ಈ ರಸ್ತೆಗೆ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿ ಮರುಜೀವ ನೀಡಿದೆ.
ಪಟ್ಟಣದಿಂದ ದಬ್ಬೇಘಟ್ಟ ಗ್ರಾಮದವರಿಗೆ ಸೂಳೇಕೆರೆ ಮೂಲಕ ಹಾದು ಹೋಗುವ ಮುಖ್ಯ ರಸ್ತೆ , ಪಟ್ಟಣದಿಂದ ಕೇವಲ ಒಂದುವರೆ ಕಿಲೋಮೀಟರ್ ದೂರದವರೆಗೆ ಉತ್ತಮವಾದ ರಸ್ತೆ ನಿರ್ಮಾಣವಾಗಿದ್ದು, ಇನ್ನು ಸೂಳೆಕೆರೆ ಗ್ರಾಮದ ಹತ್ತಿರ ಅರ್ಧ ಕಿಲೋಮೀಟರ್ ನಷ್ಟು ರಸ್ತೆಯು ಅಧಿಕಾರಿಗಳ ನಿರ್ಲಕ್ಷದಿಂದ ಸುಮಾರು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದು, ಹದಗೆಟ್ಟು ಹೋಗಿತ್ತು, ಈ ರಸ್ತೆಯಲ್ಲಿ ಸುಮಾರು ದ್ವಿಚಕ್ರವಾಹನದ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದರು, ಈ ರಸ್ತೆಯಿಂದ ಆಗುವ ಸಮಸ್ಯೆಯಿಂದ ಬೇಸತ್ತಿದ್ದ ಸಾರ್ವಜನಿಕರನ್ನು ಗಮನಿಸಿದ, ತಾಲೂಕು ರಾಜ್ಯ ಮಾಹಿತಿ ಹಕ್ಕು ತಾಲೂಕು ಅಧ್ಯಕ್ಷರಾದ ರುದ್ರೇಶ್, ಗಮನಿಸಿ ತಕ್ಷಣ ತಾಲೂಕಿನ ಶಾಸಕರಿಗೆ ವಿಷಯ ಮುಟ್ಟಿಸಿದ್ದಾರೆ,
ಇದಕ್ಕೆ ಸ್ಪಂದಿಸಿದ ತಾಲೂಕು ಶಾಸಕರಾದ ಮಸಾಲ ಜಯರಾಮ್ ಅವರು ತಕ್ಷಣ ಈ ರಸ್ತೆಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಕೂಡಲೇ ದೂರವಾಣಿ ಕರೆ ಮೂಲಕ ಮಾತನಾಡಿ, ರಸ್ತೆಯ ಸಮಸ್ಯೆಯ ಮಾಹಿತಿಯನ್ನು ಕೇಳಿಕೊಂಡು ಈ ಕೂಡಲೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಇದರಿಂದಾಗಿ ಕೂಡಲೇ ಎಚ್ಚೆತ್ತು ಅಧಿಕಾರಿಗಳು, ತಾಲೂಕು ಶಾಸಕರ ಸೂಚನೆಯಂತೆ ಅಧಿಕಾರಿಗಳು, ಸ್ಥಳದಲ್ಲೇ ಇದ್ದ ರಾಜ್ಯ ಮಾಹಿತಿ ಹಕ್ಕು ಪದಾಧಿಕಾರಿಗಳು ಸೇರಿ ತಾಲೂಕು ರಾಜ್ಯ ಮಾಹಿತಿ ಹಕ್ಕು ಅಧ್ಯಕ್ಷರಾದ ರುದ್ರೇಶ್ ಅವರ ಕೈಯಿಂದಲೇ ಭೂಮಿ ಪೂಜೆ ಮಾಡಿ ರಸ್ತೆ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ಒಟ್ಟಾರೆ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿ ತಾಲೂಕಿನಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪಣತೊಟ್ಟು ನಿಂತಂತಿದೆ. ಇನ್ನೂ ಈ ರಸ್ತೆ ಆಗುತ್ತಿರುವ ಹಿನ್ನೆಲೆ ಸಾರ್ವಜನಿಕರು ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ,
ಈ ಸಂದರ್ಭದಲ್ಲಿ ಜಿ.ಆರ್.ರಂಗೇಗೌಡ, ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿ ಪದಾಧಿಕಾರಿಯಾದ ದೊರೆಸ್ವಾಮಿ, ಊರಿನ ಮುಖಂಡರಾದ ಚಂದ್ರಣ್ಣ, ಶಿವಕುಮಾರ್, ಕುಮಾರ್, ಇನ್ನು ಅನೇಕ ಸ್ಥಳೀಯರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1