ತುಮಕೂರು: ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ವಿವಿಧ ಮಾದರಿಯ ಬಟ್ಟೆಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ರಜತಾದ್ರಿಪುರದ ಟೋಲ್ ಬಳಿ ಓಮಿನಿ ವಾಹನವನ್ನು ತಪಾಸಣೆ ನಡೆಸಿದಾಗ ₹3 ಲಕ್ಷ ಬೆಲೆ ಬಾಳುವ ವಿವಿಧ ಮಾದರಿಯ ಬಟ್ಟೆಗಳು ಇರುವುದು ಪತ್ತೆಯಾಗಿದೆ.
ಮೂವರನ್ನು ವಶಕ್ಕೆ ಪಡೆದಿರುವ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಎಂಜಿನಿಯರ್ ಎಚ್.ಎನ್. ಹೊನ್ನೇಶಪ್ಪ ನೇತೃತ್ವದ ತಂಡ ಮುಂದಿನ ಕ್ರಮ ಕೈಗೊಂಡಿದೆ.
ಇನ್ನೊಂದೆಡೆ ಲಕ್ಷಾಂತರ ಮೌಲ್ಯದ ಎಲ್ ಇಡಿ ಬಲ್ಬ್ ಗಳನ್ನು ವಶಕ್ಕೆ ಪಡೆಯಲಾಗಿದ್ದು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಇಂನ್ವೆಂಟರ್ ಲ್ಯಾಂಪ್ ಹಾಗೂ ಎಲ್ ಇ ಡಿ ಬಲ್ಬ್ ಗಳನ್ನು ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಗೇಟ್ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸಂಚಾರಿ ಜಾಗೃತ ದಳ ವಾಹನ ತಪಾಸಣೆ ವೇಳೆ ಪತ್ತೆ ಮಾಡಿದ್ದು, ಕೆ.ಎ 25. ಬಿ 2160 ಸರಕು ವಾಹನ ಮತ್ತು ವಾಹನದಲ್ಲಿ 6.84,001 ಲಕ್ಷ ಮೌಲ್ಯದ ಎಲ್.ಇ.ಡಿ ಬಲ್ಬ್ ಸಾಗಿಸಲಾಗುತ್ತಿತ್ತು. ಸಮರ್ಪಕ ವಿಳಾಸ ಇಲ್ಲದ ಕಾರಣ ವಾಹನ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಿಂದ ತಿಪಟೂರಿಗೆ ಬರುತ್ತಿದ್ದ ವಾಹನವಾಗಿದೆ. ತಿಪಟೂರಿನಲ್ಲಿ ಅಸ್ಪಷ್ಟ ವಿಳಾಸ #532/337, 4ನೇ ಮುಖ್ಯರಸ್ತೆ, ಕೆ.ಆರ್ ಬಡಾವಣೆಗೆ ವಾಹನದಲ್ಲಿ 10 ಡಬ್ಲೂ ಇಂನ್ವೆಂಟರ್ ಲ್ಯಾಂಪ್, 60 ಬಾಕ್ಸ್ 720 ಸಂಖ್ಯೆಯ ಬಲ್ಬ್ ಇದ್ದವು.
ಸಂಚಾರಿ ಜಾಗೃತ ದಳದ ಚುನಾವಣಾ ಅಧಿಕಾರಿ ಎಚ್.ಆರ್ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ತಪಾಸಣೆ ಮಾಡಲಾಯಿತು. ಲಾರಿ ಚಾಲಕ ರೇಣುಕಯ್ಯ ವಶಕ್ಕೆ ಪಡೆದು ಮುಂದುವರೆದ ವಿಚಾರಣೆ. ಮುಂದುವರೆಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy